ADVERTISEMENT

‘ಭೋವಿ ಸಮುದಾಯ ಶೋಚನೀಯ ಸ್ಥಿತಿಯಲ್ಲಿ’

ದೇವನಹಳ್ಳಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:45 IST
Last Updated 19 ಜನವರಿ 2017, 6:45 IST
‘ಭೋವಿ ಸಮುದಾಯ ಶೋಚನೀಯ ಸ್ಥಿತಿಯಲ್ಲಿ’
‘ಭೋವಿ ಸಮುದಾಯ ಶೋಚನೀಯ ಸ್ಥಿತಿಯಲ್ಲಿ’   

ದೇವನಹಳ್ಳಿ: ‘ಈಗಲೂ ಭೋವಿ ಸಮುದಾಯ ಶೋಚನೀಯ ಸ್ಥಿತಿಯಲ್ಲಿದೆ ’ ಎಂದು ಮಾಜಿ ಶಾಸಕ ವೆಂಕಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ದೇವನಹಳ್ಳಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರರ 845ನೇ ಜಯಂತಿಯಲ್ಲಿ   ಭಾಗವಹಿಸಿ ಅವರು ಮಾತನಾಡಿದರು.

ಪ್ರಾದೇಶಿಕವಾಗಿ ಭೋವಿ ಅಥವಾ ಒಡ್ಡರು ಎಂದು ಕರೆಯಲ್ಪಡುವ ಸಮುದಾಯದಲ್ಲಿ ವೃತ್ತಿ ಪರಂಪರೆಯ ಕಲ್ಲು ಕೆಲಸ, ಮಣ್ಣು ಅಗೆಯುವುದು, ಕೆರೆ ಕಟ್ಟೆ, ದೇವಾಲಯ ನಿರ್ಮಾಣವೇ ಜೀವನಕ್ಕೆ ಆಧಾರವಾಗಿದೆ. ತುಂಡು ಭೂಮಿ ಜತೆಗೆ ಶೈಕ್ಷಣಿಕ ಪ್ರಗತಿ ಸುಧಾರಣೆಯಾಗುತ್ತಿಲ್ಲ, ಸಂಕಷ್ಟದಲ್ಲಿರುವ ಸಮುದಾಯದಲ್ಲಿ ಶಿಕ್ಷಣದ ಜಾಗೃತಿ ಮೂಡಿಸಬೇಕು ಎಂದರು.

ಪರಿಶಿಷ್ಟ ಜಾತಿಯಲ್ಲಿ ಕೆಲವು ಒಡಕು ಮಾಡಿಸಿ ಅಮಾನವೀಯ ವರ್ಗ ವ್ಯವಸ್ಥೆಯತ್ತ ಇಂದಿನ ಹೋರಾಟಗಳು ನಡೆಯುತ್ತಿರುವುದು ನೋವುಂಟು ಮಾಡುತ್ತಿದೆ ಎಂದು ಹೈಕೋರ್ಟ್ ವಕೀಲ ಶಂಕ್ರಪ್ಪ ಹೇಳಿದರು.

ತಹಶೀಲ್ದಾರ್ ಜಿ.ಎ ನಾರಾಯಣಸ್ವಾಮಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪಿಳ್ಳಮುನಿಶಾಮಪ್ಪ, ನಿರಂತರ ಶ್ರಮಜೀವಗಳಾಗಿರುವ ಭೋವಿ ಸಮುದಾಯ ಸವಲತ್ತು ಪಡೆಯಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಭೋವಿ ಸಂಘ ರಾಷ್ಟ್ರೀಯ ಅಧ್ಯಕ್ಷ ಲಾಲ್ ಚಂದ್ ಮಾತನಾಡಿದರು. ಭೋವಿ ಮಠ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಸಾನಿಧ್ಯ ವಹಿಸಿದರು. ತಾಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಜಿಪಂ ಸದಸ್ಯೆ ರಾಧಮ್ಮ ಮುನಿರಾಜು, ಕೆ.ಸಿ ಮಂಜುನಾಥ್, ಎಪಿ ಎಂಸಿ ನಿರ್ದೇಶಕ ಸುಧಾಕರ್, ಕೆ ವಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಚಿನ್ನಪ್ಪ, ಬ್ಯಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಜಿ ಮಂಜುನಾಥ್, ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ಎಸ್ ಜಿ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಮುರಳಿಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.