ADVERTISEMENT

ಪ್ರತಿಭಾನ್ವಿತರನ್ನು ಕಲಾದೇವಿ ಆಶೀರ್ವದಿಸುತ್ತಾಳೆ

ಗೋಕಾಕ: ‘ಮಾಲತಿಶ್ರೀ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಹಿರಿಯ ಕಲಾವಿದ ಎಸ್‌.ಶಿವರಾಂ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:26 IST
Last Updated 9 ಮಾರ್ಚ್ 2017, 11:26 IST
ಗೋಕಾಕ: ಕಲಾವಿದರಿಗೆ ಪ್ರೇಕ್ಷಕರೇ ಅನ್ನದಾತರು. ಅವರ ಆಶೀರ್ವಾದದಿಂದ ಕಲಾವಿದರು ಬೆಳೆಯಲು ಸಾಧ್ಯ ಎಂದು ರಾಜ್ಯ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪುರ ಸ್ಕೃತ ಚಲನಚಿತ್ರ ಹಿರಿಯ ನಟ, ಎಸ್. ಶಿವರಾಂ ಹೇಳಿದರು.
 
ಮಂಗಳವಾರ ಯೋಗಿಕೊಳ್ಳ ರಸ್ತೆ ಯಲ್ಲಿರುವ ರೋಟರಿ ರಕ್ತ ಭಂಡಾರದ ಸಭಾಗೃಹದಲ್ಲಿ ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್‌ (ರಿ) ಗೋಕಾಕ ಹಾಗೂ ತಾಲ್ಲೂಕಿನ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಿಗೆ ನೀಡುವ ರಾಜ್ಯ ಮಟ್ಟದ ‘ಮಾಲತಿಶ್ರೀ ರಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಮಾತನಾಡಿದರು.
 
 ಸಮಾಜದ ಅಂಕು-ಡೊಂಕುಗಳನ್ನು ನಾಟಕದ ಮೂಲಕ ತೋರಿಸಿ ತಿದ್ದು ವುದೇ ನಾಟಕ ಕಲೆ. ಕಲಾವಿದ ಕಲೆಯ ಪ್ರತಿನಿಧಿಯಾಗಿ ಆದರ್ಶ ವ್ಯಕ್ತಿಯಾಗಿರ ಬೇಕು. ಪ್ರತಿಭೆ ಇದ್ದವರನ್ನು ಮಾತ್ರ ಕಲಾ ದೇವಿ ಅಪ್ಪಿಕೊಂಡು ಆಶೀರ್ವದಿಸು ತ್ತಾಳೆ. ಅಂತಹ ಕಲಾವಿದರನ್ನು ಸಮಾ ಜವೂ ಪ್ರೋತ್ಸಾಹಿಸಬೇಕು. ಅಂದರೆ ಮಾತ್ರ ವೃತ್ತಿ ರಂಗಭೂಮಿ ಉಳಿಯಲು ಸಾಧ್ಯ ಎಂದರು.
 
ಕಲಾವಿದರು ಇನ್ನೊಬ್ಬ ಕಲಾವಿದ ನನ್ನು ಮೆಚ್ಚಿಕೊಳ್ಳುವುದು ಅತ್ಯಂತ ವಿರಳ. ಮಾಲತಿಶ್ರೀ ಮೈಸೂರು ಅವರು ಹಿರಿಯ ಕಲಾವಿದರನ್ನು ಹುಡುಕಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ. ವಿರಸವಿಲ್ಲದ, ಸರಸಮಯ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
 
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು,  ರಾಜ್ಯದ ಹಲವಾರು ಕಲಾವಿದರು ವೃತ್ತಿ ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂಥ ಮಹಾನ್ ಕಲಾವಿದರನ್ನು ಸಮಾಜ ಮರೆಯುತ್ತಿರುವುದು ದುಃಖದ ಸಂಗತಿ.

ಮರೆತು ಹೋಗಿರುವ ಗೋಕಾಕದ ಶಾರದಾ ಸಂಗೀತ ನಾಟಕ ಮಂಡಳಿಯ ಶ್ರೇಷ್ಠ ಕಲಾವಿದ ಬಸವಣ್ಣೆಪ್ಪ ಹೊಸಮನಿ ಅವರು ವೃತ್ತಿ ರಂಗಭೂಮಿಗೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಇಂದಿನ ಅವಶ್ಯಕತೆ ಯಾಗಿದೆ. ಈ ನಿಟ್ಟಿನಲ್ಲಿ ಅವರು ನಿಧನರಾದ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವದಲ್ಲಿ ಸ್ಮಾರಕ ನಿರ್ಮಾಣ ಮತ್ತು ಪ್ರತಿವರ್ಷ ಅವರ ಹುಟ್ಟುಹಬ್ಬದ ದಿನದಂದು ವೃತ್ತಿ ರಂಗಭೂಮಿ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು.
 
ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಇಂದಿನ ಅಧುನಿಕ ಪರಿಸ್ಥಿತಿಯಲ್ಲಿ ಕಲಾವಿದರ ಸ್ಥಿತಿ ಶೋಚನೀಯವಾಗಿದೆ. ಕಾರಣ ಜನರು ಕಲಾವಿದರಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವ ಮೂಲಕ ಪ್ರೋತ್ಸಾಹಿ ಸಬೇಕು ಎಂದರು.
 
ಈ ವರ್ಷದ 'ಮಾಲತಿಶ್ರೀ ರಂಗ ಪ್ರಶಸ್ತಿ'ಯನ್ನು ಪ್ರಖ್ಯಾತ ನಟ ಮತ್ತು ನಾಟಕ ಕಂಪನಿ ಮಾಲೀಕರಾದ ಚಿತ್ರದುರ್ಗ ಜಿಲ್ಲೆಯ ಕುರುಬರಹಟ್ಟಿ ಗ್ರಾಮದ ಹಿರಿಯ ಕಲಾವಿದ ಕುಮಾರ ಸ್ವಾಮಿ ಬಿ. ಹಾಗೂ ಹೆಸರಾಂತ ಹಿರಿಯ ಹಾಸ್ಯನಟಿ ಗದುಗಿನ ಮಾಬವ್ವ (ನೂರ ಜಹಾನ್) ಅವರಿಗೆ ನೀಡಿ ಗೌರವಿಸಲಾಯಿತು.
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕ ಮಹಾಂತೇಶ ತಾಂವಶಿ ವಹಿಸಿ ದ್ದರು. ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಂಗಭೂಮಿ ನಟ ಸಂಜಯ ಸೂರಿ, ಕಿರುತೆರೆ ನಟಿ ಲಕ್ಷ್ಮಿ ನಾಡಗೌಡ, ರೋಟರಿ ರಕ್ತ ಭಂಡಾರದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ ಇದ್ದರು. 
 
ಆಶಾಕಿರಣ ಕಲಾ ಟ್ರಸ್ಟನ ರೂವಾರಿ ಮಾಲತಿಶ್ರೀ ಮೈಸೂರ, ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ರಜನಿ ಜೀರಗ್ಯಾಳ, ತಾಲ್ಲೂಕು ಘಟಕದ ಅಧ್ಯಕ್ಷ ಜಯಶ್ರೀ ಮಳಗಿ, ಹಿರಿಯ ಕಲಾ ವಿದ  ಬಸವರಾಜ ಬೆಂಗೇರಿ,  ವಸಂತ ಕುಲಕರ್ಣಿ, ಚುಟುಕು ಕವಿ ಟಿ.ಸಿ. ಮೊಹಿರೆ, ಪ್ರೊ.ಚಂದ್ರಶೇಖರ ಅಕ್ಕಿ, ಜ.ಬಿ.ತಾಂವಶಿ, ಸುರೇಶ ಸೊಲ್ಲಾಪೂರ ಮಠ, ಮಹಾಲಿಂಗ ಮಂಗಿ, ಶಕುಂತಲಾ ದಂಡಗಿ, ಪುಷ್ಪಾ ಮುರಗೋಡ ಇತರರು ಇದ್ದರು. ವೈಶಾಲಿ ಭರಭರಿ ಸ್ವಾಗತಿಸಿ ದರು. ಸಾಹಿತಿ ಗುಡಿಹಳ್ಳಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಕೊಕ್ಕರಿ ಹಾಗೂ ಪೂಜಾ ಹಿರೇಮಠ ನಿರೂಪಿಸಿದರು. ವಕೀಲೆ ಸಂಗೀತಾ ಬನ್ನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.