ADVERTISEMENT

ಲಕ್ಷಾಂತರ ಮೌಲ್ಯದ ಮರಳು ವಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:40 IST
Last Updated 17 ಏಪ್ರಿಲ್ 2017, 6:40 IST

ರಾಯಬಾಗ: ಅಕ್ರಮ ಮರಳು ಸಂಗ್ರಹ ಅಡ್ಡೆಯ ಮೇಲೆ ತಹಶೀಲ್ದಾರ್ ಕೆ.ಎನ್ ರಾಜಶೇಖರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು ಲಕ್ಷಾಂತರ ಮೌಲ್ಯದ 70 ಬ್ರಾಸ್ ಮರಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.ತಾಲ್ಲೂಕಿನ ಶಿರಗೂರ ಗ್ರಾಮದ ಭೋವಿ ತೋಟದ ಹತ್ತಿರ ಕೃಷ್ಣಾ ನದಿಯ ದಡದ ಹೊಲ ಗದ್ದೆಗಳಲ್ಲಿ ಮರಳು ದಂಧೆಕೋರರು ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ಕಂದಾಯ, ಲೋಕೋ ಪಯೋಗಿ, ಪೊಲೀಸ್ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಗಳು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ, ₹2.80 ಲಕ್ಷ ಮೌಲ್ಯದ 70 ಬ್ರಾಸ್ ಮರಳು ವಶಪಡಿಸಿ ಕೊಂಡಿದ್ದಾರೆ.

ವಶಪಡಿಕೊಂಡ ಮರಳನ್ನು ಹರಾಜು ಮಾಡಲು ಮುಂದಾದಾಗ ಕಲ್ಮೇಶ್ವರ ಮಠದವರು  ಮರಳನ್ನು ಖರೀದಿಸಲು ಮುಂದೆ ಬಂದಾಗ ಹಣ ಪಾವತಿಸಿ ಎರಡು ದಿನದಲ್ಲಿ ತೆಗೆದು ಕೊಂಡು ಹೋಗಲು ಸೂಚಿಸಿದರು.ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಕೆ.ಎನ್ ರಾಜಶೇಖರ, ಲೋಕೋಪ ಯೋಗಿ ಅಧಿಕಾರಿ ಬಿ.ಬಿ ಬೇಡಿಕಿಹಾಳ, ತಾಲ್ಲೂಕು ಪಂಚಾಯ್ತಿ ಇ.ಒ. ಡಿ.ಎಂ. ಜಕ್ಕಪ್ಪ ಗೋಳ, ಎಂ.ಜಿ ಉಪ್ಪಾರ, ಕುಡಚಿ ಪಿಎಸ್‍ಐ ಶಿವಶಂಕರ ಮುಕರಿ, ಪಿ.ಎಸ್. ಕುಲಕರ್ಣಿ, ವೈ.ಕೆ. ಹೆಳವರ, ಎಚ್.ಕೆ. ದಶವಂತ, ಜಮೀರ ಡಾಂಗೆ, ಆರ್.ಎಲ್. ಹೊರಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT