ADVERTISEMENT

ವ್ರೂಮ್‌... ವ್ರೂಮ್‌... ರೋಮಾಂಚಕ ರೇಸ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:27 IST
Last Updated 22 ಮೇ 2017, 7:27 IST
ವ್ರೂಮ್‌... ವ್ರೂಮ್‌... ರೋಮಾಂಚಕ ರೇಸ್‌
ವ್ರೂಮ್‌... ವ್ರೂಮ್‌... ರೋಮಾಂಚಕ ರೇಸ್‌   

ಬೆಳಗಾವಿ: ಇಲ್ಲಿನ ಉದ್ಯಮಬಾಗದ ಧ್ಯಾನ ಪ್ರಬೋಧನ ಶಾಲೆಯ ಬಳಿ ಸಿದ್ಧಪಡಿಸಲಾಗಿದ್ದ ಮಣ್ಣಿನ ಟ್ರಾಕ್‌ನಲ್ಲಿ ಭಾನುವಾರ ನಡೆದ ‘ಡರ್ಟ್‌ ಬೈಕ್‌ ರೇಸ್‌’ ನೆರೆದಿದ್ದವರ ಮೈನವಿರೇಳಿಸಿತು.

ಬೆಳಗಾವಿ ಮೋಟೋ ಕ್ರೀಡಾ ಸಂಘ ಮತ್ತು ಗೋವಾ ಮೋಟೋ ಕ್ರೀಡಾ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಕರ್ನಾಟಕ ಮುಕ್ತ ಸೂಪರ್‌ಕ್ರಾಸ್‌–2017– ಬೆಳಗಾವಿ’ ಸ್ಪರ್ಧೆಯಲ್ಲಿ ಸವಾರರು ನಡೆಸಿದ ಕಸರತ್ತು ಹಾಗೂ ಸಾಹಸಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಯುವಜನರು ಹಾಗೂ ಮಕ್ಕಳಲ್ಲಿ ರೋಮಾಂಚನ ಮೂಡಿಸಿದವು. ಬಿಜೆಪಿ ಮುಖಂಡರಾದ ಅಭಯ ಪಾಟೀಲ, ಸನತ್‌ಕುಮಾರ್‌ ಸ್ಪರ್ಧೆಯನ್ನು ಉದ್ಘಾಟಿಸಿದರು.

ಆಯೋಜಕರಾದ ಅಭಯಕುಮಾರ ಮಗದುಮ್‌, ಅಕ್ಷಯ ಮಗದುಮ್‌, ಆಶ್ಲೆ ಗೋಮ್ಸ್‌, ಅಭಿಷೇಕ ಮಗದುಮ್‌, ಶಿವ ಮಮದಾಪುರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಯಸ್ಕರು, ಮಕ್ಕಳು ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಮೂವರು ಮಹಿಳೆಯರು ಮಾಡಿದ ಬೈಕ್‌ ಸವಾರಿ ಗಮನಸೆಳೆಯಿತು.

ADVERTISEMENT

12 ವರ್ಷ ವಯಸ್ಸು ಮೇಲ್ಪಟ್ಟವರ ವಿಭಾಗದಲ್ಲಿ 8, ವಯಸ್ಕರಲ್ಲಿ 30 ಮಂದಿ ಸ್ಪರ್ಧೆ ಒಡ್ಡಿದರು.ವಿಜೇತರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು ಇಂತಿದ್ದಾರೆ:ಗ್ರೂಪ್‌ ಸಿ (250 ಸಿಸಿವರೆಗೆ):  ಮಹಮದ್‌ ಷರೀಫ, ವಾಸಿಂ ಬೈಗಿರ್‌ದಾರ್‌, ಯುವರಾಜ್‌ ಬಿ.

* ಬುಲೆಟ್‌ ಕ್ಲಾಸ್‌: ಮಹೇಶ್ ಚೌಗಲಾ, ಸಂಜಯ್‌ ಕೊಕಾಟೆ, ಅನಿಕೇತ್‌ ಕರಗಾಂವಕರ.
* 12 ವರ್ಷ ವಯೋಮಿತಿಯವರು:  ಸಾರ್ಥಕ ಚವಾಣ, ಐ. ಶಾನ್‌ಬಾಗ್‌, ಜಿನೇಂದ್ರ ಎಸ್‌.
* ಮಹಿಳೆಯರ ವಿಭಾಗ:   ತಾನಿಕಾ ಶಾನ್‌ಬಾಗ್‌, ಶಬ್ರಿಮಾ ಶಾ, ಶಾಶ್ಮಿತಾ ಸೇತಿ.
* ಗ್ರೂಪ್‌ ಬಿ (250 ಸಿಸಿವರೆಗೆ): ಮೊಹಮದ್‌ ಷರೀಫ್‌, ವಾಸಿಂ ಬಾಗಿರ್‌ದಾರ್‌, ಅಲ್ತಾಫ್‌ ಬಾಗಿರ್‌ದಾರ್‌.
* ಕಿರಿಯರ ವಿಭಾಗ 2 (15 ವರ್ಷ ವಯೋಮಿತಿ): ಯುವರಾಜ್‌ ಸಿಂಗ್, ಸಾರ್ಥಕ್‌ ಚವಾಣ್‌, ಪ್ರಜ್ವಲ್‌ ವಿ.
* ಎಸ್‌X2 (450 ಸಿಸಿವರೆಗೆ, ಫಾರಿನ್‌ ಕ್ಲಾಸ್‌): ಆದರ್ಶ ಕೆ., ಕೆ. ಪಾಟೀಲ, ಜಾವೇದ್‌ ಶೇಖ್‌.
* ಎಸ್‌X3 (250 ಸಿಸಿಯಿಂದ 450 ಸಿಸಿವರೆಗೆ): ಆದರ್ಶ ಕೆ., ಕೆ. ಪಾಟೀಲ, ಹಮೀದ್‌ ಖಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.