ADVERTISEMENT

ಕೆರೆ ಒತ್ತುವರಿ:ತನಿಖಾ ಸಮಿತಿಯಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST

ಬೆಂಗಳೂರು: ಕೆರೆ ಒತ್ತುವರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾನ್ಯತಾ ಟೆಕ್‌ಪಾರ್ಕ್‌, ಬಾಗಮಾನೆ ಟೆಕ್‌ಪಾರ್ಕ್‌ ಸೇರಿದಂತೆ ವಿವಿಧ ಪ್ರದೇಶಗಳಿಗೆ ಇದೇ 25 ಮತ್ತು 26ರಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಕೆರೆ ಒತ್ತುವರಿ ತನಿಖೆಗೆ ರಚಿಸಿದ ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ತಿಳಿಸಿದರು.

ಕೆರೆ ಒತ್ತುವರಿ ಮಾಡಿರುವವರ ಪಟ್ಟಿಯಲ್ಲಿ ಇರುವ ದೊಡ್ಡ ಕಂಪೆನಿಗಳ ಅಪಾರ್ಟ್‌ಮೆಂಟ್‌, ವಾಣಿಜ್ಯ ಸಮುಚ್ಚಯ ಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲಿಸಲಿದೆ ಎಂದು  ಮಾಧ್ಯಮಗೋಷ್ಠಿಯಲ್ಲಿ ಅವರು ವಿವರಿಸಿದರು.

ದಾಸರಹಳ್ಳಿಯ ಬ್ರಿಗೇಡ್‌ ಗ್ರೂಪ್‌ ಹಾಗೂ ಎಂಬೆಸಿ ಗ್ರೂಪ್‌ ಕಟ್ಟಡ, ನಾಗವಾರದ ಕಾರ್ಲೆ ಕಂಪನೀಸ್‌, ಜೆ.ಪಿ. ನಗರದ ಪೂರ್ವಂಕರ, ಕೆ.ಆರ್‌. ಪುರದ ವಿ.ಆರ್‌. ಮಾಲ್‌, ಪ್ರಥಮದರ್ಜೆ ಕಾಲೇಜು ಕಟ್ಟಡಗಳನ್ನು ಪರಿಶೀಲಿಸಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.