ADVERTISEMENT

ಜಯಾ ಮೇಲ್ಮನವಿ: ವಿಚಾರಣೆ ಅಂತಿಮ ಘಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:48 IST
Last Updated 6 ಮಾರ್ಚ್ 2015, 19:48 IST

ಬೆಂಗಳೂರು: ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಇತರ ಮೂವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ­ಯಲ್ಲಿ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸುತ್ತಿರುವ ಭವಾನಿ ಸಿಂಗ್‌ ಅವರು ಶುಕ್ರವಾರ ತಮ್ಮ ವಾದ ಪೂರೈಸಿದರು.

ಇದರಿಂದಾಗಿ ಈ ಪ್ರಕರಣದಲ್ಲಿನ  ವಾದ ಪ್ರತಿವಾದ ಮುಕ್ತಾಯದ ಹಂತ ತಲುಪಿದೆ. ಬಿಜೆಪಿಯ ಹಿರಿಯ ನಾಯಕ ಮತ್ತು ಈ ಪ್ರಕರಣದ
ಮೂಲ ದೂರು­ದಾರ­ರಾದ ಸುಬ್ರಮಣಿಯನ್‌ ಸ್ವಾಮಿ ಅವರು ಮಾ.9ರಂದು ಕೋರ್ಟ್‌ಗೆ ಹಾಜರಾಗಲಿದ್ದು ತಮ್ಮ ಹೇಳಿಕೆ ಮಂಡಿಸಲಿದ್ದಾರೆ.

ಪ್ರತಿವಾದ ಮುಕ್ತಾಯಗೊಳಿಸಿದ ಸಿಂಗ್‌ ಅವರು, 200 ಪುಟಗಳ ಲಿಖಿತ ಮತ್ತು ವಿವಿಧ ತೀರ್ಪುಗಳ ಸುಮಾರು 400 ಪುಟಗಳ ವಿವರವನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು. ಜಯಲಲಿತಾ, ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣ­ದಲ್ಲಿ ಆಪಾದಿತರಾಗಿದ್ದಾರೆ. ಈ ಪ್ರಕರಣದ ಮೇಲ್ಮನವಿಯನ್ನು ನ್ಯಾಯ­ಮೂರ್ತಿ ಸಿ.ಆರ್.­ಕುಮಾರಸ್ವಾಮಿ ಅವರಿದ್ದ ಏಕಸದಸ್ಯ ವಿಶೇಷ ಪೀಠವು ಜನವರಿ 5ರಿಂದ ವಿಚಾರಣೆ ನಡೆ­ಸುತ್ತಿದೆ. ಶುಕ್ರವಾರ 38ನೇ ದಿನದ ವಿಚಾರಣೆ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.