ADVERTISEMENT

ದೈಹಿಕ ಭಿನ್ನತೆ ನ್ಯೂನತೆ ಅಲ್ಲ

ವಿಚಾರ ಸಂಕಿರಣದಲ್ಲಿ ಪ್ರಾಧ್ಯಾಪಕಿ ಎಚ್‌. ನಿಖಿಲಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:49 IST
Last Updated 17 ಫೆಬ್ರುವರಿ 2017, 19:49 IST
ಬೆಂಗಳೂರು: ‘ದೈಹಿಕ ಭಿನ್ನತೆಯನ್ನು ಮಹಿಳೆಯರು ನ್ಯೂನತೆ ಅಥವಾ ಹೊರೆಯೆಂದು ಭಾವಿಸಬಾರದು’ ಎಂದು ಹೈದರಾಬಾದಿನ ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಚ್‌.ನಿಖಿಲಾ ಹೇಳಿದರು.
 
ನಗರದಲ್ಲಿನ ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿ ನಲ್ಲಿ ‘ಲಿಂಗತ್ವ ಅಸ್ಮಿತೆ’ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣ­ದಲ್ಲಿ ಅವರು ಮಾತನಾಡಿದರು.
 
‘ಲಿಂಗತ್ವ ಸೂಚಿಸುವಿಕೆ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದೆ. ಮಹಿಳೆಯರ ಅಸ್ಮಿತೆಯ ಕುರಿತಾಗಿ ಮಾತನಾಡುವಾಗ ಮಾತ್ರ ಲಿಂಗತ್ವ ಚರ್ಚೆಗೆ ಬರುತ್ತದೆ. ಹೆಣ್ಣಿನ ಮಾತು, ಉಡುಪು ಮತ್ತು ವರ್ತನೆ ಹೀಗೆಯೇ ಇರಬೇಕೆಂದು ನಿಬಂ ಧನೆಗಳನ್ನು ಸಮಾಜದಲ್ಲಿ ಹೇರಲಾಗುತ್ತಿದೆ’ ಎಂದರು.
 
‘ಸ್ತ್ರೀ–ಪುರುಷರ ನಡುವಿನ ದೈಹಿಕ ವ್ಯತ್ಯಾಸ ಆಧರಿಸಿ ಶ್ರೇಷ್ಠತೆ ನಿರ್ಧರಿಸಲಾಗುತ್ತಿದೆ. ಆ ಮನೋ ಭಾವವನ್ನು ಮಹಿಳೆಯರು ಹೊರೆ ಯೆಂದು ಭಾವಿ­ಸುವ ಬದಲು ನಿರ್ಲಕ್ಷಿಸಬೇಕು’ ಎಂದರು.
 
ಮಹಾರಾಣಿ ಮಹಿಳಾ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ರವೀಂದ್ರ ರೇಷ್ಮೆ ಮಾತನಾಡಿ, ‘ಶ್ರೇಷ್ಠತೆಯ ಸ್ಥಾನಕ್ಕಾಗಿ ಗಂಡ ಹೆಂಡತಿ  ಸ್ಪರ್ಧೆಗಿಳಿದಾಗ ಸ್ನೇಹಶೀಲತೆ ಮಾಯ ವಾಗುತ್ತದೆ. ಆಗ ಸಂಸಾರದಲ್ಲಿ ಸಾಮ ರಸ್ಯ ಇರುವುದಿಲ್ಲ. ಷರತ್ತುಗಳಿಲ್ಲದ ಸ್ನೇಹ ದಿಂದ ಲಿಂಗ ತಾರತಮ್ಯವನ್ನು ತೊಡೆದು ಹಾಕಬಹುದು’ ಎಂದು  ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.