ADVERTISEMENT

‘ನವಭಾರತ ಶಿಲ್ಪಿ ರಾಜೀವ್’

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ರಾಜೀವ್ ಗಾಂಧಿ ಭಾವಚಿತ್ರಕ್ಕೆ ಕೆಪಿಸಿಸಿ ಸದಸ್ಯೆ ಕಲ್ಪನಾ ಎಲಿಗಾರ್ ಪುಷ್ಪನಮನ ಸಲ್ಲಿಸಿದರು. ಡಿಸಿಸಿ ಸದಸ್ಯೆ ಸುಬ್ಬಲಕ್ಷ್ಮಿ ಇದ್ದರು.
ರಾಜೀವ್ ಗಾಂಧಿ ಭಾವಚಿತ್ರಕ್ಕೆ ಕೆಪಿಸಿಸಿ ಸದಸ್ಯೆ ಕಲ್ಪನಾ ಎಲಿಗಾರ್ ಪುಷ್ಪನಮನ ಸಲ್ಲಿಸಿದರು. ಡಿಸಿಸಿ ಸದಸ್ಯೆ ಸುಬ್ಬಲಕ್ಷ್ಮಿ ಇದ್ದರು.   

ಬೆಂಗಳೂರು: ‘ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜೀವ್ ಗಾಂಧಿ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ’ ಎಂದು ಕೆಪಿಸಿಸಿ ಸದಸ್ಯೆ ಕಲ್ಪನಾ ಎಲಿಗಾರ್ ಹೇಳಿದರು.

ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಅಂಗವಾಗಿ ನಾಗದೇವನಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಗ್ರಾಮೀಣ ಜನತೆಯ ಸರ್ವತೋಮುಖ ಅಭಿವೃದ್ಧಿ ರಾಜೀವ್ ಅವರ ಪ್ರಥಮ ಪ್ರಾಶಸ್ತ್ಯ
ವಾಗಿತ್ತು. ಗ್ರಾಮೀಣ ಭಾರತೀಯರ ವಿದ್ಯಾಭ್ಯಾಸಕ್ಕೆ ಹಲವು ಯೋಜನೆಗಳನ್ನು ಅವರು ರೂಪಿಸಿದ್ದರು ಎಂದು ಹೇಳಿದರು.

ADVERTISEMENT

ಡಿಸಿಸಿ ಸದಸ್ಯೆ ಸುಬ್ಬಲಕ್ಷ್ಮಿ ಸೇರಿದಂತೆ ವಾರ್ಡ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.