ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ತಂದೆ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:44 IST
Last Updated 19 ಜನವರಿ 2017, 19:44 IST
ಬಾಲಕಿ ಮೇಲೆ ಅತ್ಯಾಚಾರ: ತಂದೆ ಬಂಧನ
ಬಾಲಕಿ ಮೇಲೆ ಅತ್ಯಾಚಾರ: ತಂದೆ ಬಂಧನ   

ಬೆಂಗಳೂರು: ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ  ಆಕೆಯ ತಂದೆ  ರವಿ (42) ಎಂಬಾತನನ್ನು  ಪೀಣ್ಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ರುಕ್ಮಿಣಿನಗರದ ನಿವಾಸಿಯಾಗಿದ್ದ ಆತ,  ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.   ಬಾಲಕಿಯ ಮೊದಲ ತಂದೆ ತೀರಿಕೊಂಡಿದ್ದರಿಂದ ಆಕೆಯ ತಾಯಿಯು  ರವಿಯನ್ನು ಎರಡನೇ ಮದುವೆಯಾಗಿದ್ದರು.

‘ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಆಗ ರವಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಾಗ ವಿಷಯ ಗೊತ್ತಾಗಿದೆ. ಬಳಿಕ ಘಟನೆ ಬಗ್ಗೆ ತಾಯಿಯು ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೀಣ್ಯ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.