ADVERTISEMENT

‘ಸಹಕಾರಿ ಕ್ಷೇತ್ರದಿಂದ ಸ್ವಾವಲಂಬನೆ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:49 IST
Last Updated 19 ನವೆಂಬರ್ 2017, 19:49 IST
ನಟಿ ಬಿ. ಸರೋಜಾದೇವಿ ಅವರನ್ನು ಡಾ.ಜಿ. ಪರಮೇಶ್ವರ ಹಾಗೂ ಎಸ್.ಟಿ.ಸೋಮಶೇಖರ್ ಸನ್ಮಾನಿಸಿದರು.
ನಟಿ ಬಿ. ಸರೋಜಾದೇವಿ ಅವರನ್ನು ಡಾ.ಜಿ. ಪರಮೇಶ್ವರ ಹಾಗೂ ಎಸ್.ಟಿ.ಸೋಮಶೇಖರ್ ಸನ್ಮಾನಿಸಿದರು.   

ಬೆಂಗಳೂರು: ‘ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿ ಕ್ಷೇತ್ರ ಮಹತ್ವದ ಕೊಡುಗೆ ನೀಡಿದೆ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೆಂಗೇರಿ ಉಪನಗರ ಬಂಡೇಮಠದಲ್ಲಿ ಭಾನುವಾರ ನಡೆದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು.

‘ಸಮಾಜದ ಅಭಿವೃದ್ಧಿಗೂ ಮಹಿಳೆ ದುಡಿಯುತ್ತಿದ್ದಾಳೆ. ರಾಷ್ಟ್ರವನ್ನು ಮುನ್ನಡೆಸುವ ಚಾಕಚಕ್ಯತೆಯೂ ಮಹಿಳೆಗಿದೆ’ ಎಂದರು.

ADVERTISEMENT

‘ಪಾಶ್ಚಾತ್ಯ ದೇಶಗಳಲ್ಲಿ ಮಹಿಳೆಯರಿಗೆ ಸಮಾನತೆ ಬೇಕೆಂದುಪ್ರತಿಪಾದಿಸಲಾಗುತ್ತದೆ. ಆದರೆ, ಅನುಷ್ಠಾನಗೊಂಡಿಲ್ಲ. ಭಾರತದ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50 ರಷ್ಟು ಮೀಸಲಾತಿ ನೀಡುವ ಮೂಲಕ ಸಮಾನತೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದರು.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದದ್ದು. ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ನೀಡಿ, ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

‘ಅವಕಾಶ ವಂಚಿತ ದುರ್ಬಲ ವರ್ಗದವರ ಸೂರಿನ ಕನಸಿಗೆ ರಾಜ್ಯ ವಸತಿ ಮಹಾಮಂಡಲ ಆಸರೆಯಾಗಿದೆ’ ಎಂದು ತಿಳಿಸಿದರು. ಯಾವುದೇ
ಗ್ರಾಮ, ನಗರದ ಅಭಿವೃದ್ಧಿಯಲ್ಲಿ ಸಹಕಾರಿಗಳ ಪಾತ್ರ ಮಹತ್ವದ್ದು. ನಾಗರಿಕರ ನಡುವೆ ಉತ್ತಮ ಬಾಂಧವ್ಯ ಹೆಚ್ಚಿಸಲು ಸಹಕಾರಿ ಕ್ಷೇತ್ರ ರಹದಾರಿ ಎಂದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲಾವಾರುಸಹಕಾರಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.