ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ; ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:09 IST
Last Updated 27 ಮೇ 2017, 6:09 IST

ಗುಂಡ್ಲುಪೇಟೆ: ಮಕ್ಕಳನ್ನು ಬಳಸಿ ಕೊಂಡು ನೀರು ತರಬೇಕಿದೆ. ಅವರನ್ನು ದುಡಿಸುವುದು ತಪ್ಪು ಎಂದು ಸರ್ಕಾರ ಹೇಳುತ್ತಿದೆ. ಆದರೆ ಬೇರೆ ದಾರಿ ಇಲ್ಲ. ನೀವು (ಅಧಿಕಾರಿಗಳು) ಸ್ನಾನ ಮಾಡಿ ಸಭೆಗೆ ಬಂದಿದ್ದೀರಿ. ರೈತರಾದ ನಾವು ಸ್ನಾನ ಮಾಡಿ ಎರಡು ದಿನವಾಯಿತು. ಕುಡಿಯಲು ನೀರು ಕೊಟ್ಟಿಲ್ಲ. ಸರ್ಕಾರ ದಿಂದ ಬೇರೆ ಏನು ನೀಡಲು ಸಾಧ್ಯ?...

ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿ ಕಾರಿ ಮುಂದೆ ರೈತರು ಅವರ ಸಮಸ್ಯೆ ಯನ್ನು ಬಿಚ್ಚಿಟ್ಟ ಪರಿ ಇದು. ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಯ ವತಿಯಿಂದ ಜನಸಂಪರ್ಕ ಸಭೆ ನಡೆಯಿತು.

ಅಧಿಕಾರಿಗಳ ನಿರ್ಲಕ್ಷ್ಯತನದಿಂದಲೇ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮಾತನಾಡಿದ ನಂತರ ರೈತರು ಸಮಸ್ಯೆಗಳನ್ನು ಹೇಳಿಕೊ ಳ್ಳಲು ಅವಕಾಶ ನೀಡಬೇಕು ಎಂದಾಗ ರೈತರು ಆಕ್ಷೇಪ ವ್ಯಕ್ತ ಪಡಿಸಿದರು.

ADVERTISEMENT

ರೈತರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು. ಬಿತ್ತನೆ ಕಾರ್ಯಗಳನ್ನು ಬಿಟ್ಟು ಸಭೆಗೆ ಬಂದಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದರು.

ವಡ್ಡಗೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಲಾ ಗಿದ್ದು, ಅದು ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮಾಡಲಾಗಿದೆ. ಆದರೆ ಅವರು ಸ್ಪಂದಿಸುತ್ತಿಲ್ಲ. ಕುಂದುಕೆರೆ ಗ್ರಾಮದಿಂದ ಉಪಕಾರ ಗ್ರಾಮದವರಗೆ ನೀರಿನ ಪೈಪನ್ನು ಚರಂಡಿ ಸಮೀಪವೇ ಹೂಳಲಾಗಿದೆ.

ಪೈಪ್‌ ಒಡೆದು ಚರಂಡಿ ನೀರು ಕುಡಿಯುವ ನೀರಿನ ಜತೆ ಬರು ತ್ತಿದೆ ಎಂದು ರೈತ ಮುಖಂಡ ಕುಂದಕೆರೆ ಸಂಪತ್‌ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಬಿ.ರಾಮು ಮಾತ ನಾಡಿ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದರು.

ತೆರಕಣಾಂಬಿ ಗ್ರಾಮದ ಎಸ್‌ಬಿಐ ಬ್ಯಾಂಕ್‌ನಲ್ಲಿ ಅಧಿಕಾರಿಗಳು ರೈತರ ಜತೆ ಸರಿಯಾಗಿ ವರ್ತಿಸುತ್ತಿಲ್ಲ. ಹಣ ಮತ್ತು ಯೋಜನೆಯ ಬಗ್ಗೆ ವಿಚಾರಿಸಿದರೆ ಸಮಗ್ರ ಮಾಹಿತಿ ನೀಡುವುದಿಲ್ಲ ಎಂದು ರೈತರೊಬ್ಬರು ದೂರಿದರು.

ಅನೇಕ ರೈತರಿಗೆ ಬರ ಪರಿಹಾರ ನೀಡಲಾಗಿದೆ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಾರೆ. ಬ್ಯಾಂಕಿಗೆ ಹೋದರೆ ಹಣವೇ ಬಂದಿರು ವುದಿಲ್ಲ. ಯಾರನ್ನು ನಂಬಬೇಕು? ರೈತರು ಅನ್ನ ನೀಡುವವರು ಅವರು ಮುಖ್ಯ ಎಂದು ಸರ್ಕಾರ ಹೇಳುತ್ತದೆ. ಆದರೆ, ಅವರಿಗೆ ಬೇಕಾದ ಸೌಕರ್ಯ ವನ್ನು ನೀಡುವುದಿಲ್ಲ ಎಂಬ ದೂರು ಕೇಳಿ ಬಂದಿತು.

ರೈತರು ಸಾಂಪ್ರದಾಯಿಕ ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಕುರಿಗಳ ಸಾಕಾಣಿಕೆ ಮಾಡಬೇಕು. ಪುಷ್ಪ ಕೃಷಿ ಯಿಂದಲೂ ಲಾಭಗಳಿಸಬಹುದು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ‘ಮೂರು ವರ್ಷಗಳಿಂದ ಕಂದಾಯ ಅದಾಲತ್‌ನಲ್ಲಿ ಅರ್ಜಿ ಸಲಿಸಿದ್ದರೂ ಪೋಡಿ ಖಾತೆ ಯಾಗುತ್ತಿಲ್ಲ. ಅಧಿಕಾರಿಗಳು ಕೆಲಸ ಕಾಲ ಕಳೆಯುತ್ತಿದ್ದಾರೆ’ ಎಂದು ದೂರಿದರು.

ಸಭೆ ವಿಳಂಬ: ಬೆಳಿಗ್ಗೆ 10.30ಕ್ಕೆ ಆರಂಭ ವಾಗ ಬೇಕಿದ್ದ ಸಭೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾ ಧಿಕಾರಿ ಅವರು ತಡವಾಗಿ ಬಂದ ಕಾರಣ ವಿಳಂಬವಾಗಿ ಆರಂಭವಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಹರೀಶ್ ಕುಮಾರ್, ಜಿ.ಪಂ.ಸದಸ್ಯರಾದ ಪಿ.ಚನ್ನಪ್ಪ, ಬಿ.ಕೆ.ಬೊಮ್ಮಯ್ಯ, ಅಶ್ವಿನಿ, ಉಪ ವಿಭಾಗಾಧಿಕಾರಿ ರೂಪಾ, ತಹಶೀಲ್ದಾರ್ ಕೆ.ಸಿದ್ದು, ತಾಲ್ಲೂಕು ಪಂಚಾಯಿತಿ ಇಒ ಪುಷ್ಪಾ ಎಂ.ಕಮ್ಮಾರ್ ಹಾಗೂ ಬಿಇಒ ಸಿ.ಎನ್.ರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.