ADVERTISEMENT

ರಸ್ತೆ ಮೇಲೆಯೇ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:58 IST
Last Updated 5 ಸೆಪ್ಟೆಂಬರ್ 2017, 6:58 IST

ಚಾಮರಾಜನಗರ: ನಗರದ ಕೋರ್ಟ್‌ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಒಂದು ತಿಂಗಳೇ ಕಳೆದಿದೆ. ಆರಂಭದಲ್ಲಿ ಚುರುಕಾಗಿದ್ದ ಕಾಮಗಾರಿ ಈಗ ಮಂದಗತಿಯಲ್ಲಿ ಸಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಕಾಕ್ರೀಟ್‌ ಚರಂಡಿ ನಿರ್ಮಾಣ ಕೆಲಸ ನಡೆಯುತ್ತಿದೆ.

ಅಗಲೀಕರಣ ಮತ್ತು ಚರಂಡಿ ತೆಗೆಯುವ ಉದ್ದೇಶದಿಂದ ಮೆಲೆತ್ತಿದ ಮಣ್ಣನ್ನು ರಸ್ತೆಯ ಮೇಲೆಯೇ ಹರಡಲಾಗಿತ್ತು. ಇದರಿಂದ ಹೊಂಡಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ. ಮಳೆಬಂದರಂತೂ ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ಸಂಚರಿಸುವುದಕ್ಕೆ ಹೆಣಗಾಡಬೇಕು.

ಈಗ ಕೆಲವು ದಿನಗಳಿಂದ ಜಿಲ್ಲಾ ಕಾರಾಗೃಹದ ಮುಂಭಾಗದಲ್ಲಿ ಚರಂಡಿಯೊಂದನ್ನು ಈ ರಸ್ತೆಗೆ ಸಂಪರ್ಕಿಸಲಾಗಿದೆ. ಇದರಿಂದ ಕೊಳಚೆ ನೀರು ರಸ್ತೆಯ ಮೇಲೆಯೇ ನೇರವಾಗಿ ಹರಿಯುತ್ತಿದೆ. ದುರ್ವಾಸನೆ ಬೀರುವ ಕೊಳಚೆಯ ನಡುವೇ ಇಲ್ಲಿನ ಜನರು ನಿತ್ಯ ಸಂಚರಿಸುವಂತಾಗಿದೆ. ಚರಂಡಿಯ ನೀರನ್ನು ಮುಖ್ಯ ಚರಂಡಿಗೆ ಸಂಪರ್ಕಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.