ADVERTISEMENT

ಸೋರುತಿಹುದು ಅಂಗನವಾಡಿ ಕೇಂದ್ರದ ಮಾಳಿಗೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 7:07 IST
Last Updated 12 ಸೆಪ್ಟೆಂಬರ್ 2017, 7:07 IST
ಸಂತೇಮರಹಳ್ಳಿ ಸಮೀಪದಲ್ಲಿರುವ ಹೆಗ್ಗವಾಡಿಪುರ ಗ್ರಾಮದಲ್ಲಿ ಮಳೆಗೆ ಶಿಥಿಲಾವಸ್ಥೆ ತಲುಪಿರುವ ಅಂಗನವಾಡಿ ಕೇಂದ್ರ
ಸಂತೇಮರಹಳ್ಳಿ ಸಮೀಪದಲ್ಲಿರುವ ಹೆಗ್ಗವಾಡಿಪುರ ಗ್ರಾಮದಲ್ಲಿ ಮಳೆಗೆ ಶಿಥಿಲಾವಸ್ಥೆ ತಲುಪಿರುವ ಅಂಗನವಾಡಿ ಕೇಂದ್ರ   

ಸಂತೇಮರಹಳ್ಳಿ: ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಗಾಳಿಗೆ ಹೆಗ್ಗವಾಡಿಪುರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಕುಸಿದು ಬೀಳುವ ಹಂತದಲ್ಲಿದ್ದು, ಮುಂಜಾಗ್ರತೆಯಾಗಿ ಮಕ್ಕಳಿಗೆ ರಜೆ ನೀಡಲಾಗಿದೆ.

ಗ್ರಾಮದಲ್ಲಿ ಇರುವ ಅಂಗನವಾಡಿ 2ನೇ ಕೇಂದ್ರ ಶಿಥಿಲಾವಸ್ಥೆಯಲ್ಲಿ ಇತ್ತು. ಕೇಂದ್ರದಲ್ಲಿ 8 ಮಕ್ಕಳು ಇದ್ದರು. ವಾರದಿಂದ ಸತತ ಮಳೆಯಾಗುತ್ತಿದ್ದು, ಕೇಂದ್ರದ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ.

ಛಾವಣೆಯ ಗಾರೆ ಉದುರುತ್ತಿದೆ. ನೀರು ಸೋರಿಕೆಯಾಗಿ ಅಂಗನವಾಡಿ ಕೇಂದ್ರದ ಒಳ ಭಾಗದಲ್ಲಿ ನಿಂತಿದೆ. ಮಕ್ಕಳು ಕುಳಿತುಕೊಳ್ಳಲೂ ಆಗದ ಸ್ಥಿತಿ ಇದೆ.
ಶಿಥಿಲಾವಸ್ಥೆಯನ್ನು ತಲುಪಿರುವ ಕಟ್ಟಡದ ಗೋಡೆ ಮೂಲಕ ಮಳೆಯ ನೀರು ಸೋರಿಕೆಯಾಗುತ್ತಿದೆ. ಹಂತ ಹಂತವಾಗಿ ಗೋಡೆಗಳು ತೇವಾಂಶದಿಂದ ಬಿರುಕು ಬಿಡುತ್ತಿವೆ.
ಮಕ್ಕಳಿಗೆ ನೀಡುವ ಆಹಾರಕ್ಕೆ ಮಳೆ ನೀರು ತುಂಬಿ ಉಪಯೋಗಕ್ಕೆ ಬಾರದಂತೆ ಆಗಿದೆ. ಕಟ್ಟಡದ ಗೋಡೆಗಳು ಯಾವುದೇ ಸಮಯದಲ್ಲಿ ಕುಸಿದು ಬೀಳಬಹುದು ಎಂಬ ಆತಂಕವಿದೆ.

ADVERTISEMENT

ಕಿಟಕಿ, ಬಾಗಿಲು ಕೂಡಾ ಭದ್ರವಿಲ್ಲದಂತಾಗಿದೆ. ಕಟ್ಟಡದ ದುಃಸ್ಥಿತಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹಾಗೂ ಮಕ್ಕಳು ಭಯಬೀತರಾಗಿದ್ದಾರೆ.
ಕಟ್ಟಡವನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಕೇಂದ್ರದ ಪರವಾಗಿ ಗ್ರಾಮಸ್ಥರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬ ಬೇಸರವೂ ಗ್ರಾಮಸ್ಥರಲ್ಲಿದೆ.

‘ಹತ್ತಿರದಲ್ಲಿನ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಗೊಂಡಿದೆ. ಪ್ರಸ್ತುತ ಶಾಲೆಯ ಕೊಠಡಿಗಳು ಶಾಲೆ ಖಾಲಿ ಇವೆ. ಅಲ್ಲಿಗೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಬೇಕು’ ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.