ADVERTISEMENT

ಸ್ವಾಮಿ ವಿವೇಕಾನಂದರ ರಾಕ್‌ ಡೇ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 9:55 IST
Last Updated 26 ಡಿಸೆಂಬರ್ 2016, 9:55 IST

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದ ಬಾಹುಬಲಿ ಯುವಕರ ಸ್ವಸಹಾಯ ಸಂಘದ ನೇತೃತ್ವ ದಲ್ಲಿ ಭಾನುವಾರ ‘ಸ್ವಾಮಿ ವಿವೇಕಾ ನಂದರ ರಾಕ್‌ ಡೇ’ ಕಾರ್ಯಕ್ರಮ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದರು ಕನ್ಯಾ ಕುಮಾರಿ ತಲುಪಿ ಸುಮಾರು 2 ಕಿ.ಮೀ ಈಜಿ ಸಮುದ್ರದ ಬಂಡೆ ತಲುಪಿ ಅಲ್ಲಿರುವ ದೇವಿ ದರ್ಶನ ಕೋರಿ ತಪಸ್ಸಿಗೆ ಕುಳಿತ ದಿನವನ್ನು ‘ರಾಕ್‌ ಡೇ’ ಎಂದು ಆಚರಿಸಲಾಗುತ್ತದೆ ಎಂದು ಎಂ.ಮಹದೇವು ತಿಳಿಸಿದರು.

ಗ್ರಾಮಸ್ಥರು, ಯುವಜನರು, ಶೈಕ್ಷಣಿಕ ಪ್ರವಾಸ ಬಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸ್ವಾಮಿ ವಿವೇಕಾನಂದ ಕುರಿತ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿಚಾರ ವೇದಿಗೆ ಸಂಸ್ಥಾಪಕ ನಾಗೇಂದ್ರ ಮಾತನಾಡಿದರು.ಬಾಹುಬಲಿ ಯುವಕರ ಸ್ವಸಹಾಯ ಸಂಘದ ಯುವಕರು, ಸಮಾಜ ಸುಧಾರಕರು ಹಾಗೂ ನಿವೃತ್ತ ಶಿಕ್ಷಕ ಎಂ.ಮಹಾದೇವು, ಮೇರಾಡ ಸಂಸ್ಥೆ ವ್ಯವಸ್ಥಾಪಕ ಮಂಜುನಾಥ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.