ADVERTISEMENT

ಕುರುವಂಗಿ: ಸರ್ವತೋಮುಖ ಅಭಿವೃದ್ಧಿ

ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗೆ ಸಿ.ಟಿ. ರವಿ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 5:07 IST
Last Updated 4 ಫೆಬ್ರುವರಿ 2017, 5:07 IST
ಚಿಕ್ಕಮಗಳೂರು: ಕುರುವಂಗಿ ಸಮಗ್ರ ಗ್ರಾಮ ವಿಕಾಸವಾಗಿ ಮಾದರಿ ಗ್ರಾಮವ ನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. 
 
ತಾಲ್ಲೂಕಿನ ಕುರುವಂಗಿಯಲ್ಲಿ ₹75ಲಕ್ಷ ವೆಚ್ಚದ ‘ಗ್ರಾಮ ವಿಕಾಸ ಯೋಜನೆ’ಗೆ ಇತ್ತೀಚೆಗೆ ಅವರು ಚಾಲನೆ ನೀಡಿ ಮಾತನಾಡಿದರು.
 
ಹಿಂದೆ ಸುವರ್ಣ ಗ್ರಾಮ ಯೋಜನೆ ಯನ್ನು ಕುರುವಂಗಿಗೆ ನೀಡಲಾಗಿತ್ತು. ತಾಲ್ಲೂಕಿಗೆ ಮಂಜೂರಾಗಿದ್ದ 2 ಗ್ರಾಮ ವಿಕಾಸ ಯೋಜನೆಗಳಲ್ಲಿ ಒಂದನ್ನು ದೇವಗೊಂಡನಹಳ್ಳಿ ಮತ್ತೊಂದನ್ನು ಕುರುವಂಗಿಗೆ ನೀಡಲಾಗಿತ್ತು. ಗ್ರಾಮ ವಿಕಾಸವೆಂದರೆ ಸಂಪೂರ್ಣ ಶೌಚಾಲಯ ಯುಕ್ತ, ಶುದ್ಧಗಂಗಾ ಘಟಕ ಕೆಂದ್ರಗಳ ನಿರ್ಮಾಣ, ಕೌಶಲ ಅಭಿವೃದ್ಧಿಯಿಂದ ಕೂಡಿರಬೇಕು. ಜತೆಗೆ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದೆಂಬ ನಿಯ ಮಗಳಲ್ಲಿ ಕೆಲವು ಕಾರ್ಯರೂಪಕ್ಕೆ ಬಂದವು. ಬಾಕಿ ಉಳಿದಿರುವ ಯೋಜ ನೆಗೆ ಒತ್ತು ನೀಡಬೇಕು ಎಂದರು.
 
ದುಶ್ಚಟದಿಂದ ದೂರವಿರಬೇಕು. ಉದ್ಯೋಗಕ್ಕೆ ಬೇಕಾದ ಯೋಜನೆ ರೂಪಿ ಸಬೇಕು. ಮಾದರಿ ಕೃಷಿಕರಾಗಿರಬೇಕು. ಹೈನುಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸ ಬೇಕು ಹೀಗೆ ಹಲವು ನಿಯಮಗಳಿವೆ. ಇವುಗಳನ್ನು ಪರಿಪೂರ್ಣಗೊಳಿಸಬೇಕು. ಬರಿ ರಸ್ತೆ ಚರಂಡಿ ಕಾಮಗಾರಿ ನಿರ್ವಹಿಸಿದರೆ ಸಾಲದು. ಮನುಷ್ಯ ಹಾಗೂ ಕುಟುಂಬಗಳು ಅಭಿವೃದ್ಧಿ ಹೊಂದಿದಾಗ ಗ್ರಾಮ ವಿಕಾಸವಾಗಲು ಸಾಧ್ಯ. ಕುರುವಂಗಿ ಮಾದರಿ ಗ್ರಾಮವಾಗಬೇಕು. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು. 
 
ಗ್ರಾಮಸ್ಥ ಗಿರಿಜೇಗೌಡ ಮಾತನಾಡಿ, ಶಾಸಕರು ಕುರುವಂಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ₹6.75ಲಕ್ಷ ವೆಚ್ಚದಲ್ಲಿ ಶುದ್ಧ ಗಂಗಾ ಘಟಕ ಸಾಪನೆ, ₹1ಕೋಟಿ ವೆಚ್ಚದಲ್ಲಿ ಸುವರ್ಣಗ್ರಾಮ ಯೋಜನೆ, ₹50 ಲಕ್ಷದ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ, ನರಿ ಗುಡ್ಡೇನಹಳ್ಳಿಯಿಂದ ನೆಟ್ಟೇಕೆರೆಹಳ್ಳಿ ವರೆಗೂ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು. 
 
ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಮಾಜಿ ಸದಸ್ಯ ಕೆ.ಟಿ.ಮರಿಶೆಟ್ಟಿ ಅವರನ್ನು ಸ್ವಾಗತಿಸಿದರು. 
 
ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್,ತಾಲ್ಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಎಪಿಎಂಸಿ ಸದಸ್ಯ ವಿಕ್ರಾಂತ್, ಪಂಚಾಯಿತಿ ಉಪಾಧ್ಯಕ್ಷ ರಮ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಚೆನ್ನಶೆಟ್ಟಿ, ಗಂಗಪ್ಪ, ಮುಖಂಡರಾದ ಕೋಟೆ ರಂಗ ನಾಥ್, ಕನಕರಾಜ್,  ಕೆ.ಪಿ.ವೆಂಕಟೇಶ್, ಪುಟ್ಟಸ್ವಾಮಿಶೆಟ್ಟಿ, ಗಂಗಾಧರ ಶೆಟ್ಟಿ ಇತರರು ಇದ್ದರು. 
 
**
ಅಭಿವೃದ್ಧಿ ಕೆಲಸದಲ್ಲಿ ಕಳಪೆ ಗುಣಮಟ್ಟದ ಬಗ್ಗೆ ಗ್ರಾಮಸ್ಥರಿಗೆ ಕಂಡು ಬಂದರೆ ಜನಪ್ರತಿನಿಧಿಗಳಿಗೆ ದೂರು ನೀಡಬೇಕು.
-ಸಿ.ಟಿ. ರವಿ,
ಶಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.