ADVERTISEMENT

ಗ್ರಾಹಕರಿಗೆ ಸುರಕ್ಷಿತ ಡಿಜಿಟಲ್‌ ವ್ಯವಸ್ಥೆ ಒದಗಿಸಿ

ಪ್ರಾದೇಶಿಕ ಮುಖ್ಯಸ್ಥರ ಸಭೆಯಲ್ಲಿ ಮಹಾಬಲೇಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:03 IST
Last Updated 21 ಜುಲೈ 2017, 6:03 IST

ಮಂಗಳೂರು:  ಡಿಜಿಟಲ್ ವಹಿವಾಟಿನಲ್ಲಿ ನಿರೀಕ್ಷಿತ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ಹೇಳಿದರು.

ನಗರದ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಸದ್ಯದ ಹಣಕಾಸು ವ್ಯವಸ್ಥೆಯು ಆಶಾದಾಯಕವಾಗಿದೆ. ಸಾಲ ವಿತರಣೆಗೆ ಇನ್ನೂ ಹೆಚ್ಚಿನ ಗಮನ ನೀಡುವುದರಿಂದ ಬ್ಯಾಂಕ್‌ಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಜಿಎಸ್‌ಟಿ ಪರಿಣಾಮಕಾರಿ ಅನುಷ್ಠಾನದ ಮೂಲಕ ಪ್ರಗತಿಯ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಮೊದಲ ತ್ರೈಮಾಸಿಕದಲ್ಲಿ ಸಾಲ ವಿತರಣೆಯಲ್ಲಿ ಪ್ರಗತಿ, ನಿರ್ವಹಣಾ ಲಾಭದಲ್ಲಿ ಹೆಚ್ಚಳ ಹಾಗೂ ನಗದು ಠೇವಣಿ ಅನುಪಾತದಲ್ಲಿನ ವೃದ್ಧಿಯಿಂ ದಾಗಿ ಕರ್ಣಾಟಕ ಬ್ಯಾಂಕ್‌ ಉತ್ತಮ ಸಾಧನೆ ಮಾಡಿದೆ. ಉಳಿದ 9 ತಿಂಗಳ ಲ್ಲಿಯೂ ಇದೇ ಸಾಧನೆಯ ಮೂಲಕ ನಿರೀಕ್ಷಿತ ಗುರಿ ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ. ಸ್ವಾಗತಿಸಿದರು. ಮಹಾಪ್ರಬಂಧಕ ವೈ.ವಿ. ಬಾಲಚಂದ್ರ, ಬ್ಯಾಂಕಿನ ಮೊದಲ ತ್ರೈಮಾಸಿಕದ ವರದಿಯನ್ನು ಮಂಡಿಸಿದರು. ಮಹಾ ಪ್ರಬಂಧಕರಾದ ಚಂದ್ರಶೇಖರ್ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ಮುರಳೀಧರ್ ಕೃಷ್ಣರಾವ್, ನಾಗರಾಜ್ ರಾವ್ ಬಿ. ಇದ್ದರು.  

ಶದ ವಿವಿಧ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಭಾಗವಹಿಸಿ ದ್ದರು. ಸಹಾಯಕ ಮಹಾಪ್ರಬಂಧಕ ಶರತ್‌ಚಂದ್ರ ಹೊಳ್ಳ ಪಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.