ADVERTISEMENT

ಪೊಲೀಸರಿಂದ ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:48 IST
Last Updated 17 ಏಪ್ರಿಲ್ 2017, 8:48 IST

ಮಂಗಳೂರು: ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸ ಬೆಟ್ಟು ಗ್ರಾಮದ ನರಿಂಗಾನ ಮನೆಯಲ್ಲಿ ಇದೇ 14 ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀ ಸರು, ಆರೋಪಿಯನ್ನು ಬಂಧಿಸಿದ್ದಾರೆ.ಡಾಲ್ಫಿ ಗೋವಿಯಸ್‌ (38) ಬಂಧಿತ ಆರೋಪಿ. ಇದೇ 14 ರಂದು ರಾತ್ರಿ ಡಾಲ್ಫಿ ಗೋವಿಯಸ್‌, ತನ್ನ ತಂದೆ ಪೌಲ್‌ ಗೋವಿಯಸ್‌ (83) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ನಂತರ ಮನೆಗೆ ಬಂದ ತನ್ನ ಸಹೋದರ ಸ್ಟಾನಿ ಗೋವಿಯಸ್‌ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ.

‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇಲಾಖೆ, ಆರೋಪಿ ಡಾಲ್ಫಿ ಗೋವಿಯಸ್‌ನನ್ನು ಭಾನುವಾರ ಮಧ್ಯಾಹ್ನ 12 ಗಂಟೆಗೆ ಕಾರ್ಕಳ ಅಜೆಕಾರು ಪೇಟೆಯಲ್ಲಿ ವಶಕ್ಕೆ ಪಡೆದಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಆರೋಪಿ ಡಾಲ್ಫಿ ಗೋವಿಯಸ್‌ ನನ್ನು ವಿಚಾರಣೆಗೆ ಒಳಪಡಿಸಿದ್ದು, ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ’ ಎಂದು ವಿವರಿಸಿದರು.

‘2015 ರ ಜನವರಿಯಲ್ಲಿ ಡಾಲ್ಫಿ ಗೋವಿಯಸ್‌ನ ತಾಯಿ ಲಿಲ್ಲಿ ಗೋವಿ ಯಸ್‌ ಅವರ ಶವ ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾ ಕಾರಣ ತನ್ನ ಮೇಲೆ ಸುಳ್ಳು ಆರೋಪ ಹೊರಿಸಿರುವುದು, ಮನೆಯಲ್ಲಿದ್ದ ತನ್ನ ಬಂಗಾರ ಕೊಡದೇ ಇರುವುದು ಹಾಗೂ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಡಾಲ್ಫಿ ಗೋವಿಯಸ್‌ ವಿಚಾರಣೆಯಲ್ಲಿ ತಿಳಿಸಿದ್ದಾನೆ’ ಎಂದು ಹೇಳಿದರು.

ADVERTISEMENT

‘ಮೊದಲು ತನ್ನ ತಂದೆ ಪೌಲ್‌ ಗೋವಿಯಸ್‌ ಅವರ ಕಪಾಳಕ್ಕೆ ಹೊಡೆದ ಡಾಲ್ಫಿ, ತಲೆಯನ್ನು ಗೋಡೆಗೆ ಜಜ್ಜಿ ಕೆಳಕ್ಕೆ ಬೀಳಿಸಿದ್ದ. ನಂತರ ಅವರ ಕುತ್ತಿಗೆಯನ್ನು ಬಲವಾಗಿ ಹಿಡಿದು ಕೊಲೆ ಮಾಡಿದ್ದಾನೆ. ಚರ್ಚ್‌ಗೆ ತೆರಳಿದ್ದ ತನ್ನ ಸಹೋದರ ಸ್ಟಾನಿ ಬರುವವರೆಗೂ ಕಾದು, ಆತನ ಮೇಲೆಯೂ ಹಲ್ಲೆ ಮಾಡಿದ್ದಾನೆ’ ಎಂದು ತಿಳಿಸಿದರು.

‘ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಉತ್ತರ ಉಪವಿಭಾಗದ ಎಸಿಪಿ ರಾಜೇಂದ್ರ, ಸಿಸಿಬಿ ಎಸಿಪಿ ವೆಲೆಂಟೈನ್‌ ಡಿಸೋಜ, ಮೂಲ್ಕಿ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ್‌, ಮೂಡುಬಿದಿರೆ ಸಬ್‌ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ದೇಜಪ್ಪ, ಶ್ಯಾಮಸುಂದರ್‌, ಶಂಕರ ನಾಯರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು’ ಎಂದು ಹೇಳಿದರು.ಡಿಸಿಪಿ ಡಾ. ಸಂಜೀವ್‌ ಪಾಟೀಲ, ಎಸಿಪಿ ರಾಜೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.