ADVERTISEMENT

ಮಸೂದೆಯ ಕರಡು ದಹಿಸಿ ಪ್ರತಿಭಟನೆ

ರಾಷ್ಟ್ರೀಯ ಕಾನೂನು ಆಯೋಗದ ಶಿಫಾರಸಿಗೆ ವಕೀಲರ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:41 IST
Last Updated 22 ಏಪ್ರಿಲ್ 2017, 5:41 IST
ಮಂಗಳೂರು: ವಿದೇಶಿ ವಕೀಲರ ವಕಾಲ ತ್ತಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ‘ಭಾರತೀಯ ವಕೀಲರ ಕಾಯ್ದೆ’ಗೆ ತಿದ್ದು ಪಡಿ ತರುವ ಪ್ರಸ್ತಾವವನ್ನು ವಿರೋಧಿಸಿ  ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಮಂಗಳೂರು ವಕೀಲರ ಸಂಘದ ಸದ ಸ್ಯರು, ಕರಡು ಮಸೂದೆಯನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದರು.
 
ರಾಷ್ಟ್ರೀಯ ಕಾನೂನು ಆಯೋಗದ ಶಿಫಾರಸಿನಂತೆ ‘ಭಾರತೀಯ ವಕೀಲರ ಕಾಯ್ದೆ’ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಪರಿಶೀಲನಾ ಹಂತದಲ್ಲಿದೆ. ಕರಡು ಮಸೂದೆ ದೇಶದ ವಕೀಲರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮಸೂದೆಯ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು.
 
ಪ್ರತಿಭಟನೆಯನ್ನುದ್ದೇಶಿಸಿ ಮಾತ ನಾಡಿದ ಮಂಗಳೂರು ವಕೀಲರ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ, ‘ರಾಷ್ಟ್ರೀಯ ಕಾನೂನು ಆಯೋಗದ ಶಿಫಾರಸಿನಂತೆ ಸಿದ್ಧಪಡಿಸಿರುವ ಕರಡು ಮಸೂದೆಯು ದೇಶದ ವಕೀಲರ ಹಕ್ಕುಗ ಳನ್ನು ದಮನ ಮಾಡಲಿದೆ.
 
ವಿದೇಶಿ ವಕೀಲರಿಗೆ ಅವಕಾಶ ನೀಡುವುದರಿಂದ ದೇಶದ ವಕೀಲರಿಗೆ ದುಡಿಮೆಯ ಅವಕಾಶಗಳು ಕಡಿಮೆಯಾಗುತ್ತವೆ. ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂ ಡಿರುವ ಈ ಮಸೂದೆಯನ್ನು ವಕೀಲ ಸಮುದಾಯವು ಒಪ್ಪಿಕೊಳ್ಳುವುದಿಲ್ಲ’ ಎಂದರು.
 
‘ದೇಶದ ವಕೀಲರ ವಿರೋಧಿಯಂತೆ ನಡೆದುಕೊಳ್ಳುತ್ತಿರುವ ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷ ಬಿ.ಎಸ್‌. ಚೌಹಾಣ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಕರಡು ಮಸೂದೆಯನ್ನು ಕೈಬಿಡುವ ನಿರ್ಧಾರ ವನ್ನು ಮೇ 1ರ ಒಳಗೆ ಕೇಂದ್ರ ಸರ್ಕಾರ ಪ್ರಕಟಿಸಬೇಕು.
 
ತಪ್ಪಿದರೆ ಮೇ 2ರಿಂದ ದೆಹಲಿಯ ಪಟಿಯಾಲ ನ್ಯಾಯಾಲಯದ ಆವರಣದಲ್ಲಿ ಬೃಹತ್‌ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಹೇಳಿದರು. ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಮಾತನಾಡಿ, ‘ಈ ತಿದ್ದುಪಡಿ ಮಸೂದೆ ಜಾರಿಗೆ ಬಂ ದರೆ ವಕೀಲರಿಗೆ ಅನ್ಯಾಯವಾಗಲಿದೆ. 
 
ವಕೀಲರು ಅನಿವಾರ್ಯ ಕಾರಣಗಳಿಂದ ನ್ಯಾಯಾಲಯದ ಕಲಾಪಕ್ಕೆ ಹಾಜರಾ ಗದೇ ಇದ್ದ ಸಂದರ್ಭದಲ್ಲೂ ಅವರು ನ್ಯಾಯಾಲಯಕ್ಕೆ ಪರಿಹಾರ ಪಾವತಿಸ ಬೇಕೆಂಬ ಪ್ರಸ್ತಾವ ಈ ಮಸೂದೆಯಲ್ಲಿದೆ. ವಕೀಲರ ವಿರುದ್ಧವಾದ ಇಂತಹ ಅನೇಕ ಅಂಶಗಳು ಮಸೂದೆಯಲ್ಲಿದ್ದು, ವಕೀ ಲರ ಹಕ್ಕುಗಳನ್ನು ದಮನ ಮಾಡುವ ಪ್ರಯತ್ನವಿದು’ ಎಂದರು.
 
ದಿನೇಶ್ ಹೆಗ್ಡೆ ಉಳೇಪಾಡಿ, ಸುಜಿತ್ ಕುಮಾರ್, ಡೇನಿಯಲ್, ನಾರಾಯಣ, ಪ್ರಮೋದ್, ಕಿಶೋರ್, ಶ್ರೀಕುಮಾರ್, ರೂಪಾ, ಪ್ರಫುಲ್ಲಾ ಕುಮಾರಿ ಸೇರಿದಂತೆ ಹಲವು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.