ADVERTISEMENT

ಮಹಿಳೆಯ ಮೇಲೆ ಹಲ್ಲೆ, ಕಳವು ಪ್ರಕರಣದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:44 IST
Last Updated 17 ಏಪ್ರಿಲ್ 2017, 8:44 IST

ಮಂಗಳೂರು: ನಗರದ ರೈಲ್ವೆ ಕಾಲೊನಿ ಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿ, ಚಿನ್ನಾಭರಣ ದೋಚಿದ್ದ ಆರೋಪಿ ಯನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡಿನ ತಿರುವೆಲ್ಲೂರು ಜಿಲ್ಲೆಯ ಉತುಕೋಟೆ ಈಸ್ಟ್‌ ಕಾಲೊನಿ ನಿವಾಸಿ ಪಶುಪತಿ (20) ಬಂಧಿತ ಆರೋ ಪಿಯಾಗಿದ್ದು, ಆತನಿಂದ ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳ ಸಿದ ಕಬ್ಬಿಣದ ರಾಡ್ ವಶಪಡಿಸಿ ಕೊಳ್ಳಲಾಗಿದೆ.

ಇದೆ 9 ರಂದು ರೈಲ್ವೆ ಕಾಲೊನಿಯ ಮನೆಯಲ್ಲಿ ಒಂಟಿಯಾಗಿದ್ದ ಒಬ್ಬಂಟಿ ಯಾಗಿದ್ದ ಅಂಬುಜಾಕ್ಷಿ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ಚಿನ್ನಾಭರಣ ದೋಚಲಾಗಿತ್ತು. ಈ ಕುರಿತು ಸಚ್ಚಿದಾ ನಂದ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಂಧಿತ ಆರೋಪಿಯ ಮೇಲೆ ತಮಿಳುನಾಡು ರಾಜ್ಯದ ಎಫ್ 1 ಚಿಂತಾದ್ರಿಪೇಟ್ ಪೊಲೀಸ್ ಠಾಣೆ ಹಾಗೂ ವೆಲಿಪ್ಪಲಯಮ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸುಲಿಗೆ ಪ್ರಕ ರಣ ದಾಖಲಾಗಿದ್ದು, ಈ ಎರಡೂ ಪ್ರಕರಣದಲ್ಲಿ ಆರೋಪಿ 2 ವರ್ಷ 6 ತಿಂಗಳ ಜೈಲಿನಲ್ಲಿದ್ದು, ಸದ್ಯಕ್ಕೆ ಜಾಮೀ ನಿನ ಮೇಲೆ ಬಿಡುಗಡೆಯಾಗಿದ್ದ.

ADVERTISEMENT

ನಗರ ಪೊಲೀಸ್ ಆಯುಕ್ತ ಚಂದ್ರ ಶೇಖರ, ಡಿಸಿಪಿಗಳಾದ ಕೆ.ಎಂ. ಶಾಂತ ರಾಜು, ಡಾ. ಸಂಜೀವ್ ಪಾಟೀಲ್, ದಕ್ಷಿಣ ಉಪ ವಿಭಾಗದ ಎಸಿಪಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಬೆಳ್ಳಿಯಪ್ಪ ಕೆ.ಯು., ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಅನಂತ ಮುರ್ಡೇಶ್ವರ ಅವರು, ಸಾರ್ವಜನಿಕ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.