ADVERTISEMENT

ಮಿಷನ್ 95+ಯೋಜನೆಗೆ ರಾಷ್ಟ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:28 IST
Last Updated 8 ಮಾರ್ಚ್ 2017, 10:28 IST

ಪುತ್ತೂರು: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಆರಂಭಿಸಿದ ಮಿಷನ್ 95+ ಯೋಜನೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.

ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರಿಗೆ ದೆಹಲಿಯಲ್ಲಿ ದೆಹಲಿಯಲ್ಲಿ ನಡೆದ ಸರ್ಕಾರಿ ಕಾರ್ಯ ಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚುಗೊಳಿಸುವ ಉದ್ದೇಶದಿಂದ 35 ಅಂಕದೊಳಗೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಗುರಿಯಾ ಗಿರಿಸಿ 2014- 15ರ ಶೈಕ್ಷಣಿಕ ವರ್ಷ ದಿಂದ ಮಿಶನ್ 95 ಪ್ಲಸ್ ಯೋಜನೆ ಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರು ಹಮ್ಮಿಕೊಂಡು ಯೋ ಜನೆ ರೂಪಿಸಿದ್ದರು.

ಶಿಕ್ಷಣ ಆಡಳಿತದಲ್ಲಿ ನಡೆಸಿದ ಆವಿಷ್ಕಾರಕ್ಕಾಗಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಇದೀಗ ಶಶಿಧರ್ ಜಿ.ಎಸ್. ಅವರಿಗೆ ಪ್ರದಾನ ಮಾಡಲಾಗಿದೆ. ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವ ವಿದ್ಯಾಲಯ ನೀಡುವ ಈ ಪ್ರಶಸ್ತಿಯನ್ನು ಮಂಗಳವಾರ ದೆಹಲಿ ಯಲ್ಲಿ ನಡೆದ ಶೈಕ್ಷಣಿಕ ಆಡಳಿತದ ಆವಿ ಷ್ಕಾರದ ಕುರಿತಾದ ರಾಷ್ಡ್ರೀಯ ಸಮ್ಮೇಳ ನದಲ್ಲಿ ಕೇಂದ್ರ ಸರ್ಕಾರ ಮತ್ತು ವಿವಿಯ ಪ್ರಮುಖರ ಸಮ್ಮುಖ ಪ್ರದಾನ ಮಾಡಲಾಯಿತು.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಶೈಕ್ಷಣಿಕ ಆಡಳಿತದಲ್ಲಿ ಮಾಡಲಾದ ನಾನಾ ಆವಿಷ್ಕಾರಗಳಿಗೆ ಸಂಬಂಧಿಸಿದ ಯೋಜನಾ ವರದಿಗಳನ್ನು ರಾಷ್ಟ್ರಮಟ್ಟ ದಿಂದ ಆಮಂತ್ರಿಸಲಾಗಿತ್ತು. ಕರ್ನಾಟಕ ದಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿ ಕಾರಿಯವರ ಮಿಶನ್ 95 ಪ್ಲಸ್ ಯೋಜ ನೆಯನ್ನು ಆರಿಸಲಾಗಿತ್ತು. ದೆಹಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಯೋಜನೆ ಯನ್ನು ಪ್ರಸ್ತುತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.