ADVERTISEMENT

ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:48 IST
Last Updated 23 ಏಪ್ರಿಲ್ 2018, 8:48 IST
ಹ್ಯಾಕ್‌ ಆದ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಲಿಂಕ್‌ನ ಕೆಳಗೆ ಬರೆದಿರುವ ಸಾಲುಗಳು
ಹ್ಯಾಕ್‌ ಆದ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಲಿಂಕ್‌ನ ಕೆಳಗೆ ಬರೆದಿರುವ ಸಾಲುಗಳು   

ಹುಬ್ಬಳ್ಳಿ: ಪಾಕ್ ಸೈಬರ್ ಹ್ಯಾಕರ್ ‘ಮಿಯಾ ಉಮೈರ್’ ಹೆಸರಿನಿಂದ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಭಾನುವಾರ ಬೆಳಿಗ್ಗೆ ಹ್ಯಾಕ್ ಆಗಿದೆ.

#justice for Asifa Stop Killing Muslims ಎಂದು ಹ್ಯಾಷ್‌ ಟ್ಯಾಗ್‌ ಮಾಡಲಾಗಿದ್ದು, ‘I am black hat. I can target any one, any time, any where. So be careful’ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ’ಇಸ್ಲಾಂ ಎಂಬುದು ಭಯೋತ್ಪಾದನೆ ಅಲ್ಲ, ಭಯೋತ್ಪಾದನೆ ಇಸ್ಲಾಂ ಅಲ್ಲ, ಮಾನವ ಹಕ್ಕುಗಳು ಎಂಬುದು ಆಯ್ಕೆಯಲ್ಲ’ ಎಂದೂ ಬರೆಯಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಸಿ.ಎಸ್‌. ಪಾಟೀಲ, ‘ವೆಬ್‌ಸೈಟ್‌ ಹ್ಯಾಕ್ ಆದ ವಿಷಯ ಮಧ್ಯಾಹ್ನ ಎರಡೂವರೆಗೆ ಗೊತ್ತಾಯಿತು. ಕೂಡಲೇ ಲಾಕ್‌ ಮಾಡಿಸಲಾಯಿತು. ಪೊಲೀಸರಿಗೆ ಸೋಮವಾರ ದೂರು ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.