ADVERTISEMENT

ಅಚ್ಚೇ ದಿನ್ ಪ್ರಧಾನಿ ಮೋದಿ ಹುಸಿ ಭರವಸೆ: ಟೀಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 5:19 IST
Last Updated 5 ಸೆಪ್ಟೆಂಬರ್ 2017, 5:19 IST

ಗಜೇಂದ್ರಗಡ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆ ಹುಸಿ ಯಾಗಿದ್ದು, ಅದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ ವಾದಿ), ಸಿಪಿಐ (ಎಂ)ನ ನಗರ ಶಾಖೆ ಸೋಮ ವಾರ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ           ನಡೆಸಿದರು.

ಸಿಪಿಐ(ಎಂ) ನ ಪುರಸಭೆ ಸದಸ್ಯ ಎಂ.ಎಸ್.ಹಡಪದ ಮಾತನಾಡಿ, ಚುನಾ ವಣೆಯ ಸಂದರ್ಭದಲ್ಲಿ ದೇಶದ ದೊಡ್ಡ ಕಾಪೋರೇಟ್ ಕಂಪನಿಗಳ ಕೈಯಲ್ಲಿರುವ ಮಾಧ್ಯಮಗಳ ಮೂಲಕ ಸ್ವತಃ ಮೋದಿ ಅವರು ಈ ದೇಶದ ನಾಗರಿಕರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಭರವಸೆ ನೀಡುತ್ತ ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ್ದರು. ಆದರೆ ‘ಆ ಅಚ್ಚೆ ದಿನ’ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ನಿಗದಿ, ಕಪ್ಪು ಹಣ ಪತ್ತೆ ಹಚ್ಚಿ ದೇಶದ ಪ್ರತಿ ಪ್ರಜೆಗೆ ₹ 15 ಲಕ್ಷ ಜನಧನ್ ಖಾತೆಗೆ ಜಮೆ ಮಾಡುವ, ಪ್ರತಿ ವರ್ಷಕ್ಕೆ ನಿರು ದ್ಯೋಗಿ ಯುವಜನರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಸಂಪೂರ್ಣ ಮನ್ನಾ, ಭ್ರಷ್ಟಾಚಾರ ತಡೆ ಯಲು ಲೋಕಪಾಲ ನೇಮಕ, ಭಯೋ ತ್ಪಾದನೆ ತಡೆದು ಗಡಿಯಲ್ಲಿ ಶಾಂತಿ ನೆಲೆ ಸುವಂತೆ ಮಾಡುವುದು, ಜೀವನಾ ವಶ್ಯಕ ವಸ್ತುಗಳು ಸೇರಿದಂತೆ ತೈಲ ಬೆಲೆ ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಮೋದಿಯವರ ಈ ಬಣ್ಣದ ಮಾತುಗಳಿಗೆ ಮರುಳಾದ ಜನ ಬಿಜೆಪಿಗೆ ಮತ ನೀಡಿ ಆಯ್ಕೆ ಮಾಡಿ ಮೂರು ವರ್ಷ ಗತಿಸಿದರು ಕೊಟ್ಟ ಒಂದು ಭರವಸೆ ಈಡೇರಿಸಲಾಗದೆ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮಾರುತಿ ಚಿಟಗಿ, ಕೇಂದ್ರ ಸರ್ಕಾರ ತನ್ನ ಚುನಾವಣೆ ಭರವಸೆಗಳ ಈಡೇರಿಸುವ ವೈಫಲ್ಯ ಮುಚ್ಚಿಕೊಳ್ಳಲು ಪೂರ್ವಾಪರ ವಿಚಾರ ಮಾಡದೇ ಆರ್ಥಿಕ ಪಂಡಿತರ ಸಲಹೆ ಪಡೆಯದೇ ದೊಡ್ಡ ಮೊತ್ತದ ನೋಟ್ ಬ್ಯಾನ್ ಕಾರ್ಯಕ್ಕೆ ಕೈ ಹಾಕಿ ಸಂಪೂರ್ಣ ವಿಫಲವಾಯಿತು. ಇದರಿಂದ ದೇಶದ ಒಟ್ಟು ವರಮಾನದಲ್ಲಿ ಬಾರಿ ಇಳಿಕೆಯಾಗಿ ಆರ್ಥಿಕ ತುರ್ತು ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮುಚ್ಚಿ ಕೊಳ್ಳಲು  ಸರಕು ಮತ್ತು ಸೇವಾ ತೆರಿಗೆ ನೀತಿ ಜಾರಿಗೆ ತಂದು  ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ  ಎಂದು ಆರೋಪಿಸಿದರು.

ADVERTISEMENT

ಪೀರು ರಾಠೋಡ ಮಾತನಾಡಿ, ರೈತರ ಬಗ್ಗೆ ನಿಜವಾದ ಬದ್ದತೆ ಇದ್ದರೆ ಕಾರ್ಪೋರೇಟ್ ಕುಳಗಳ ಸಾವಿರಾರು ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಾಲು ರಾಠೋಡ, ಶಿವು ಚವ್ಹಾಣ, ಮೈಬು ಸಾಬ್ ಹವಾಲ್ದಾರ, ಶಿವಾನಂದ ಬೋಸ್ಲೆ, ಬಾಲು ತಿರಕೋಜಿ, ಪರಶುರಾಮ ಗಡ್ಡದ, ಚೆನ್ನಪ್ಪ ಗುಗಲೋತ್ತರ, ಶರ ಣಮ್ಮ ಹಲಗೇರಿ, ರೇಣುಕಾ ಕಲಾಲ, ಸಕ್ರಪ್ಪ ಮಾಳೋತ್ತರ, ನಜೀರ್ ಮಾಲ್ದಾರ, ಮಹಾಂತೇಶ ಹಡಪದ, ಕೃಷ್ಣಪ್ಪ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.