ADVERTISEMENT

ಜಲಾಗಾರ ಕಾಮಗಾರಿಗೆ ಶಾಸಕ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 7:36 IST
Last Updated 24 ಜುಲೈ 2017, 7:36 IST

ಮುಂಡರಗಿ: ಜನರಿಗೆ ಕುಡಿಯುವ ನೀರು, ಉದ್ಯೋಗ, ಜಾನುವಾರಗಳಿಗೆ ಮೇವು ಪೂರೈಕೆಗೆ ರಾಜ್ಯ ಸರ್ಕಾರವು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅನುದಾನ ನೀಡಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ₹ 27 ಲಕ್ಷ ವೆಚ್ಚದ ಭೂಮೇಲ್ಮಟ್ಟದ ಜಲಾಗಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ನೇತೃತ್ವದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಸದಾ ಜನಪರ ಆಡಳಿತ ನೀಡಿದೆ. ಜನರಿಗೆ ಉಪಯುಕ್ತ ವಾಗುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ವಿಶ್ವಾಸ ಪಡೆ ದಿದೆ ಎಂದು ಹೇಳಿದರು.

ADVERTISEMENT

ನಾಲ್ಕು ವರ್ಷಗಳ ಅವಧಿಯಲ್ಲಿ ಶಿರ ಹಟ್ಟಿ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತರಲಾಗಿದ್ದು, ಶಾಶ್ವತವಾಗಿ ಉಳಿಯುವ ಚೆಕ್‌ಡ್ಯಾಂ, ರಸ್ತೆ, ಚರಂಡಿ, ಸಮುದಾಯ ಭವನ ಹಾಗೂ ಕೆರೆ ನಿರ್ಮಾಣ ಸೇರಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹಲ ವಾರು ಯೋಜನೆಯನ್ನು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದಕಕೂ ಮುನ್ನ ತಾಲ್ಲೂಕಿನ ಕೊರ್ಲಹಳ್ಳಿಯಲ್ಲಿಯೂ ಜಲಾಗಾರ ಕಾಮಗಾರಿಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ, ಚನ್ನವೀರಪ್ಪ ಎಲಿಗಾರ, ಇಸ್ಮಾ ಯಿಲ್ ಖಾನ್ ತಂಬ್ರಳ್ಳಿ, ಹುಸೇನಸಾಬ್ ಮುಂಡರಗಿ, ಹನುಮಂತ ಕಿತ್ನೂರ, ತೋಟಪ್ಪ ಲಿಂಬಿಕಾಯಿ, ಶರಣಪ್ಪ ಕುಬ ಸದ, ಎಂ.ಡಿ.ತೊಗುಣಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.