ADVERTISEMENT

ನೀರಿನ ಕೊರತೆ ನೀಗಿಸಲು ಆದ್ಯತೆ

ಶಿರಹಟ್ಟಿ ತಾ.ಪಂ ಸಭೆ; ಗ್ರಾಮಗಳಲ್ಲಿ ತಲೆದೋರಿರುವ ಬರ ಸ್ಥಿತಿ ಕುರಿತು ಗಮನ ಸೆಳೆದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:07 IST
Last Updated 15 ಫೆಬ್ರುವರಿ 2017, 13:07 IST

ಶಿರಹಟ್ಟಿ: ತಾಲ್ಲೂಕಿನ ವಿವಿಧಡೆ ಕುಡಿ ಯುವ ನೀರಿನ ಅಭಾವ ಕಂಡು ಬಂದಿದ್ದು, ತೀವ್ರ ತೊಂದರೆಗೆ ಒಳಗಾಗಿ ರುವ ಗ್ರಾಮಗಳಿಗೆ ಸೂಕ್ತ ವ್ಯವಸ್ಥೆ ಮಾಡ ಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಷಣ್ಮುಖಪ್ಪ ಬುಗಟಿ ಹೇಳಿದರು.

ಬನ್ನಿಕೊಪ್ಪ ಗ್ರಾಮಕ್ಕೆ ನಿತ್ಯ 20 ಟ್ಯಾಂಕರ್‌ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಆದ್ರಳ್ಳಿ, ಬೆಳ್ಳಟ್ಟಿ, ಶಿಗ್ಲಿ ಸೇರಿದಂತೆ ಹಲವಡೆ ಬೋರವೆಲ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.  ತೀವ್ರ ಅಭಾವವಿರುವ ಶಿಗ್ಲಿ ಗ್ರಾಮದಲ್ಲಿ ರೈತರಾದ ಚಂದ್ರಕಾಂತ ನೀಲಪ್ಪ ತೋಟದ ಹಾಗೂ ಫಕೀರಪ್ಪ ನೀಲಪ್ಪ ತೋಟದ ತಮ್ಮ ಸ್ವಂತ ಬೋರವೆಲ್‌ನ ನೀರನ್ನು ಗ್ರಾಮ ಪಂಚಾಯ್ತಿಗೆ ಉಚಿತ ವಾಗಿ ಪೂರೈಕೆ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ರೈತರಿಗೆ ಅಭಿ ನಂದನೆ ಸಲ್ಲಿಸಿದರು.

ಆದ್ರಳ್ಳಿ ಗ್ರಾಮದ ಶಾಲೆಗಳಲ್ಲಿ ಮಕ್ಕ ಳಿಗೆ ಕುಡಿಯುಲು ನೀರಿಲ್ಲ. ಮನೆಯಿಂದ ತಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಬೆಳಗಾಯಿತೆಂದರೆ ಮಕ್ಕಳು ವೃದ್ಧರು ಎನ್ನದೆ ಒಂದು ಬಿಂದಿಗೆ ಕುಡಿಯುವ ನೀರಿಗೆ ಅಲೆದಾ ಡುವ ದುಸ್ಥಿತಿ ಬಂದಿದೆ ಎಂದು ತಾಲ್ಲೂಕ ಪಂಚಾಯತ ಸದಸ್ಯೆ ಗಿರಿಜವ್ವ ಲಮಾಣಿ ಅಧಿಕಾರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿಗಾಗಿ ₹ 2.28 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳು ಹಿಸಲಾಗಿದೆ. ಕುಡಿಯುವ ನೀರಿಗಾಗಿ ಹಣದ ಸಮಸ್ಯೆ ಇಲ್ಲ ಎಂದರು.
ಭೂಸೇನಾ ನಿಗಮದ ಅಧಿಕಾರಿ ಮಾಳೋದಕರ ಸಭೆಗೆ ಬರುವುದಿಲ್ಲ. ಹಲವಾರು ಬಾರಿ ಲಿಖಿತವಾಗಿ ಹಾಗೂ ಮೌಖಿಕವಾಗಿ ತಿಳಿಸಿದರೂ ಪ್ರಯೋಜನ ಆಗಿಲ್ಲ. ಇನ್ನೊಮ್ಮೆ ಅವರು ಸಭೆಗೆ ಬರುವದಿಲ್ಲ ಎಂದಾದರೆ ನಾವು ಸಹ ಸಭೆಗೆ ಹಾಜರಾಗುವದಿಲ್ಲ. ಎಲ್ಲ ಸದ ಸ್ಯರು ಪಕ್ಷಾತೀತವಾಗಿ ಬಹಿಷ್ಕಾರ ಹಾಕು ತ್ತೇವೆ ಎಂದು ಅಶೋಕಯ್ಯ ಮುಳ ಗುಂದಮಠ ಸಭೆಗೆ ತಿಳಿಸಿದರು.

ಪರಸಾಪುರ ಗ್ರಾಮದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಉದ್ಘಾಟನೆ ಗೊಂಡರೂ ಸಾರ್ವಜನಿಕರ ಸದುಪ ಯೋಗಕ್ಕೆ ದೊರಕುತ್ತಿಲ್ಲ. ಅಕ್ಕಿಗುಂದ ಹಾಗೂ ಮಾಗಡಿ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ತಲೆದೊರಿದೆ ಎಂದು ಮಂಜುನಾಥ ಜೋಗಿ ಹೇಳಿದರು.

ತಾಲ್ಲೂಕು ಪಂಚಾಯತ ಅಧ್ಯಕ್ಷ ಈಶಪ್ಪ ಲಮಾಣಿ, ಉಪಾಧ್ಯಕ್ಷ ಉಮಾ ಹೊನಗಣ್ಣವರ, ತಾಪಂ ಇಓ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌.ವೈ. ಗುರಿ ಕಾರ, ಸದಸ್ಯರಾದ ದೇವಪ್ಪ ಲಮಾಣಿ, ಮಂಜುನಾಥ ಜೋಗಿ, ಪವಿತ್ರಾ ಶಂಕಿನ ದಾಸರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT