ADVERTISEMENT

ಸಂಭ್ರಮದ ಕಲ್ಮೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:20 IST
Last Updated 4 ಸೆಪ್ಟೆಂಬರ್ 2017, 5:20 IST

ನರೇಗಲ್: ಮಕ್ಕಳಿಗೆ ಸಂಸ್ಕಾರಯುತ ವಾದ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು ಸಮೀಪದ ಬೂದಿಹಾಳ ಗ್ರಾಮದಲ್ಲಿ ಗುರುವಾರ ನಡೆದ ಕಲ್ಮೇಶ್ವರ ಮತ್ತು ಜೋಡಬಸವೇಶ್ವರ ರಥೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊ ಳ್ಳುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ. ಇದರಿಂದ ಆತ್ಮಶುದ್ಧಿ ಸಾಧಿಸಲು ಸಹಕಾರಿ ಎಂದು ತಿಳಿಸಿದರು. ನಿವೃತ್ತ ಉಪನ್ಯಾಸಕ ಎಸ್.ಎಸ್. ಹರ್ಲಾಪುರ ಮಾತನಾಡಿ, ಧಾರ್ಮಿಕ ಪರಂಪರೆ, ಆಚರಣೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ನಿಡಗುಂದಿಕೊಪ್ಪದ ಶಾಖಾ ಶಿವಯೋಗಮಂದಿರ ಮಠದ ಸಿದ್ದರಾಮ ಶ್ರೀ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾವವ್ವ ಮಾದರ,  ನಿರ್ಮಲಾ ಬಿಂಗಿ, ರುದ್ರಣ್ಣ ಗುಳಗುಳಿ, ಡಾ.ಎನ್.ಎಲ್. ಗ್ರಾಮಪುರೊಹಿತ ಇದ್ದರು.

ADVERTISEMENT

ಸಂಭ್ರಮದ ರಥೋತ್ಸವ: ಸಭಾ ಕಾರ್ಯ ಕ್ರಮದ ನಂತರ ಸಂಜೆ ನರೇಗಲ್, ಅಬ್ಬಿ ಗೇರಿ, ಜಕ್ಕಲಿ, ನಿಡಗುಂದಿ, ನಿಡಗುಂದಿ ಕೊಪ್ಪ, ಹಾಲಕೆರೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಕಲ್ಮೇಶ್ವರ ಮತ್ತು ಜೋಡ ಬಸವೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮದಿಂದ ತೇರು ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.