ADVERTISEMENT

ಮಳೆ ಆರ್ಭಟ: ಗದ್ದೆಗೆ ಕಂಟಕ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:29 IST
Last Updated 30 ಆಗಸ್ಟ್ 2017, 7:29 IST

ರಾಮನಾಥಪುರ( ಕೊಣನೂರು): ರಾಮನಾಥಪುರ ಮತ್ತು ಕೊಣನೂರು ಹೋಬಳಿಯ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಕಟ್ಟೇಪುರ ನಾಲೆ ವ್ಯಾಪ್ತಿಯಲ್ಲಿ ನಾಟಿಯಾದ ಭತ್ತದ ಗದ್ದೆಗಳಿಗೆ ಕಂಟಕವಾಗಿ ಪರಿಣಮಿಸಿದೆ.

ಬಿರುಸಿನ ಮಳೆಯಿಂದಾಗಿ ಕಾವೇರಿ ನದಿ ನೀರಿನಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತವಾಗಿ ಪೈರುಗಳು ನೀರಿನಲ್ಲಿ ಕೊಳಯುತ್ತಿವೆ.

ಕಳೆದ ಕೆಲ ತಿಂಗಳಿನಿಂದ ಮಳೆ ಕೊರತೆಯಾಗಿ, ಈಗ ಒಂದೇ ಸಮನೆ ಸುರಿಯುತ್ತಿರುವುದರಿಂದ ನಾಟಿಯಾದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ನದಿ ನೀರಿನ ಮಟ್ಟ ಏರಿಕೆಯಾದಲ್ಲಿ ಒಂದೆರಡು ದಿನಗಳು ಪೈರುಗಳು ನೀರಿನಲ್ಲಿ ಮುಳುಗಿದ್ದರೆ ಹಾನಿಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಂಗಳವಾರ ಬೆಳಗ್ಗೆ 8.30ರ ವರದಿಯಂತೆ ಕೊಣನೂರಿನಲ್ಲಿ 22.2 ಮಿ.ಮೀ., ರಾಮನಾಥಪುರದಲ್ಲಿ 22.8 ಮಿ.ಮೀ., ಮತ್ತು ಬಸವಾಪಟ್ಟಣದಲ್ಲಿ 19.8 ಮಿ.ಮೀ. ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.