ADVERTISEMENT

ಬೀದರ್‌– ಚಿಂಚೋಳಿ ರಸ್ತೆ ವಿಸ್ತರಣೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:28 IST
Last Updated 20 ಮೇ 2017, 5:28 IST

ಚಿಂಚೋಳಿ: ರಾಯಚೂರು– ವನ್ಮಾರ ಪಳ್ಳಿ ರಾಜ್ಯ ಹೆದ್ದಾರಿ 15ರ ಬೀದರ್‌– ಚಿಂಚೋಳಿ ನಡುವಿನ 60 ಕಿ.ಮೀ ರಸ್ತೆಯ ಅಭಿವೃದ್ಧಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

₹226 ಕೋಟಿ ಅಂದಾಜು ವೆಚ್ಚದ 12 ಮೀಟರ್‌ ಅಗಲದ ಸುಸಜ್ಜಿತ ರಸ್ತೆ ನಿರ್ಮಾಣದ ಹೊಣೆಯನ್ನು ನಾಗಪು ರದ ಡಿ.ಪಿ ಜೈನ್‌ ಆ್ಯಂಡ್‌ ಕಂಪೆನಿಗೆ ವಹಿಸಲಾಗಿದೆ. ‘ರಚನೆ, ನಿರ್ಮಾಣ, ಹಣಕಾಸು, ಚಾಲನೆ, ನಿರ್ವಹಣೆ ಮತ್ತು ವರ್ಗಾವಣೆ (ಡಿಬಿಫಾರಮ್ಯಾಟ್‌ ಅನ್ಯು ಯಿಟಿ ಬೇಸಿಸ್‌) ಆಧಾರದಲ್ಲಿ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿ ಸಿಎಲ್‌)ದೊಂದಿಗೆ ಒಪ್ಪಂದವಾಗಿದೆ.

‘ಕೆಆರ್‌ಡಿಸಿಎಲ್‌ ಕಾಮಗಾರಿಯ ಮೇಲ್ವಿಚಾರಣೆ ನಡೆಸಲಿದೆ. 2 ವರ್ಷದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊ ಳ್ಳಲಿದೆ’ ಎಂದು ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕ ಡಾ.ಶ್ರೀನಿವಾಸ ಶೇಳಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಬೀದರ್‌ ಜಿಲ್ಲೆಯಲ್ಲಿ 43 ಕಿ.ಮೀ, ಕಲಬುರ್ಗಿ ಜಿಲ್ಲೆಯಲ್ಲಿ 17 ಕಿ.ಮೀ ಉದ್ದದ ವ್ಯಾಪ್ತಿಯ ಈ ರಸ್ತೆಯು 11.335 ಕಿ.ಮೀ ಉಭಯ ಜಿಲ್ಲೆಗಳ ಅರಣ್ಯದಲ್ಲಿ ಸಾಗಲಿದೆ. 12 ದೊಡ್ಡ ಸೇತುವೆ, 90 ಚಿಕ್ಕಸೇತುವೆಗಳು ಈ ಮಾರ್ಗದಲ್ಲಿ ಬರಲಿವೆ. 26 ಕಡೆಗಳಲ್ಲಿ ಬಸ್‌ ತಂಗುದಾಣ ನಿರ್ಮಾಣ. ಚೈನೇಜ್‌ (ಕಿ.ಮೀ) 59.4ರಲ್ಲಿ ಬರುವ ಬೀದರ್‌ ಜಿಲ್ಲೆಯ ಕಮಠಾಣಾ ಬಳಿ ಮತ್ತು ಕಲಬುರ್ಗಿ ಜಿಲ್ಲೆಯ ಐನೋಳ್ಳಿ ಬಳಿಯ ಚೈನೇಜ್‌ 102.2ರಲ್ಲಿ ಟೋಲ್‌ಗೇಟ್‌ ಅಳವಡಿಸಲು ಉದ್ದೇಶಿಸಲಾಗಿದೆ.

ಚಿಂಚೋಳಿಯಿಂದ ಬೀದರ್‌ ವರೆಗಿನ 60.4 ಕಿ.ಮೀ ಉದ್ದದ ರಸ್ತೆಯ ಪೈಕಿ ಕೆಆರ್‌ಡಿಸಿಎಲ್‌ ಮಾನದಂಡಗಳಿಗೆ ಅನುಸಾರವಾಗಿ ರಾಜ್ಯ ಹೆದ್ದಾರಿ ಅಭಿ ವೃದ್ಧಿ ಯೋಜನೆ ಹಂತ 3ರಲ್ಲಿ 2.5 ಕಿ.ಮೀ ರಸ್ತೆ ನಿರ್ಮಾಣ ಪೂರ್ಣ ಗೊಂಡಿದೆ. ಬಾಕಿ ಉಳಿದ ರಸ್ತೆ ಕಾಮಗಾರಿ ಆರಂಭಿಸಲು ಜೂನ್‌ ಮೊದಲ ವಾರದಲ್ಲಿ ಶಿಲಾನ್ಯಾಸ ನೆರವೇರಿಸಲು ಉದ್ದೇಶಿಸಲಾಗಿದೆ.

‘ಕಾಮಗಾರಿಗಾಗಿ ಈಗಾಗಲೇ ಕಮಠಾಣ ಬಳಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಜಲ್ಲಿಕಲ್ಲು ಪುಡಿ ಮಾಡುವ ಘಟಕ ಮತ್ತು ಡಾಂಬರ್‌ ಪ್ಲಾಂಟ್‌ ಸ್ಥಾಪಿಸಲಾಗಿದೆ’ ಎಂದು ಯೋಜನಾ ವ್ಯವಸ್ಥಾಪಕ ಹರಪ್ರಿತಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮಾರ್ಗದಲ್ಲಿನ ಚಿಂಚೋಳಿ– ದೇಗಲಮಡಿ ಕ್ರಾಸ್‌ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಅಗಲವಾದ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ತಿಳಿಸಿದರು.

ಯೋಜನಾ ವ್ಯವಸ್ಥಾಪಕ ಹರಪ್ರಿತ್‌ ಸಿಂಗ್‌, ಉಪವ್ಯವಸ್ಥಾಪಕ ಪ್ರಸಾದರಾವ್‌  ಇದ್ದರು.

ಹೋರಾಟ: ಈ ರಸ್ತೆ ನಿರ್ಮಾಣದ ಬಗ್ಗೆ 3 ವರ್ಷಗಳಿಂದ ಭರವಸೆ ಕೇಳಿ ಸಾಕಾ ಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸ ಬೇಕು. ಇಲ್ಲದಿದ್ದರೆ ಜೆಡಿಎಸ್‌ ಹೋರಾಟ ನಡೆಸಲಿದೆ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಶೇಖ್‌ ಭಕ್ತಿಯಾರ್‌ ಜಹಾಗೀರ ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**
ಜನರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ನನ್ನ ಆದ್ಯತೆ ಅಭಿವೃದ್ಧಿಗೆ ಮಾತ್ರ. ಚಿಂಚೋಳಿ– ಬೀದರ್‌ ರಸ್ತೆ ಇದಕ್ಕೆ ನಿದರ್ಶನ.

–ಡಾ.ಉಮೇಶ ಜಾಧವ್‌, ಸಂಸದೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.