ADVERTISEMENT

ಹಾಜಿಸರ್ವರ ಜಾತ್ರೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 8:45 IST
Last Updated 16 ಏಪ್ರಿಲ್ 2017, 8:45 IST

ವಾಡಿ: ಹಿಂದೂ– ಮುಸ್ಲಿಂ ಭಾವೈಕ್ಯ ತಾಣ ಸಮೀಪದ ಲಾಡ್ಲಾಪುರದ ಪ್ರಸಿದ್ಧ ಹಾಜಿಸರ್ವರ (ಹಾದಿಶರಣ) ಜಾತ್ರೆಯಲ್ಲಿ ಶುಕ್ರವಾರ ಸಂಭ್ರಮದಿಂದ ನಡೆಯಿತು.600 ಅಡಿ ಎತ್ತರದ ಬೆಟ್ಟದ ಮೇಲಿನ ಮೂರ್ತಿಯ ದರ್ಶನಕ್ಕೆ ಭಕ್ತರು ಸುಡುವ ಬಿಸಿಲು ಲೆಕ್ಕಿಸದೆ ಬರಿಗಾಲಿನಲ್ಲೇ ಬೆಟ್ಟ ಹತ್ತಿ ದರ್ಶನ ಪಡೆದರು.
ಗ್ರಾಮದ ಸುತ್ತಲ ಜಮೀನಿನಲ್ಲಿ ಕುಟುಂಬ ಸಮೇತರಾಗಿ ಭಕ್ತರು, ಶುಕ್ರವಾರ ಬೆಳಿಗ್ಗೆ ತಮ್ಮ ಇಷ್ಟಾರ್ಥಗಳ ಪ್ರಾಪ್ತಿಗಾಗಿ ಹರಕೆ ಸಲ್ಲಿಸಿದರು.

ಸಿಹಿಭೋಜನ ಹಾಗೂ ಮಾಂಸದೂಟ ನೈವೇದ್ಯ ಗದ್ದುಗೆಗೆ ಸಮರ್ಪಿಸುವುದು ಈ ಜಾತ್ರೆ  ವಿಶೇಷ.ಶುಕ್ರವಾರ ಬೆಳಿಗ್ಗೆಯಿಂದ ಗದ್ದುಗೆಗೆ ವಿವಿಧ ಪೂಜೆ ನಡೆದವು. ಗ್ರಾಮದ ಹನುಮಾನ್ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕೈಕುಸ್ತಿ ಸಾರ್ವಜನಿಕರ ಗಮನ ಸೆಳೆಯಿತು.  ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಭಕ್ತರು ಹರಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT