ADVERTISEMENT

ಕರಾಟೆ: ರಾಷ್ಟ್ರಮಟ್ಟದಲ್ಲಿ ಕೊಡಗಿನ ಕೀರ್ತಿ

ಸುಂಟಿಕೊಪ್ಪ ಸಮೀಪದ ಪನ್ಯದ ಬಿ.ಎಂ. ಮುಖೇಶ್ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:29 IST
Last Updated 13 ಜುಲೈ 2017, 9:29 IST
ಕರಾಟೆ: ರಾಷ್ಟ್ರಮಟ್ಟದಲ್ಲಿ ಕೊಡಗಿನ ಕೀರ್ತಿ
ಕರಾಟೆ: ರಾಷ್ಟ್ರಮಟ್ಟದಲ್ಲಿ ಕೊಡಗಿನ ಕೀರ್ತಿ   

ಸುಂಟಿಕೊಪ್ಪ: ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಒಂದು ಕ್ರೀಡಾ ಪ್ರತಿಭೆಗಳ ತವರೂರು. ಇಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡು ಸುಂಟಿಕೊಪ್ಪಕ್ಕೆ ಕೀರ್ತಿಯನ್ನು ತಂದಿದ್ದಾರೆ. ಅಂತವರ ಸಾಲಿನಲ್ಲಿ ಸಮೀಪದ ಪನ್ಯ ಗ್ರಾಮದ ಬಿ.ಬಿ. ಮೋಣಪ್ಪ ಪೂಜಾರಿ– ಬೇಬಿ ದಂಪತಿ ಪುತ್ರ ಬಿ.ಎಂ.ಮುಖೇಶ್ ನಿಲ್ಲುತ್ತಾರೆ.

ಸಣ್ಣ ವಯಸ್ಸಿನಲ್ಲಿಯೇ ಸಿನಿಮಾ ನೋಡುತ್ತಿದ್ದಾಗ ಅಲ್ಲಿ ಕಂಡುಬರುವ ಫೈಟಿಂಗ್‌ ದೃಶ್ಯವನ್ನು ಕಂಡು ತಾನೂ ಈ ರೀತಿಯಾಗಿ ಒಬ್ಬ ಕರಾಟೆ ಪಟುವಾಗ ಬೇಕು ಎಂಬ ಹಂಬಲ ಮೂಡಿತ್ತು. ಅದಕ್ಕೆ ಯಾವುದೇ ಸಹಕಾರ ಮತ್ತು ಶಿಕ್ಷಕರ ಕೊರತೆ ಕಂಡುಬಂದಿತ್ತು.

ಪಿಯು ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲಿಯಾದರೂ ಕರಾಟೆ ಟೂರ್ನಿ ನಡೆ ಯುತ್ತಿದ್ದರೇ ಅಲ್ಲಿಗೆ ತೆರಳಿ ವೀಕ್ಷಿಸುತ್ತಾ, ತಮ್ಮ ಪೋಷಕರಲ್ಲಿ ತಾನೊಬ್ಬ ಕರಾಟೆ ತರಬೇತಿ ಪಡೆಯಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದರು. ಆದರೆ, ಪ್ರಾರಂಭಿಕ ಹಂತದಲ್ಲಿ ಮನೆಯರಿಂದ ತನ್ನ ಮಗ ಉತ್ತಮ ಶಿಕ್ಷಣವನ್ನು ಪಡೆದು ಮುಂದು ವರಿಯಲಿ ಎಂಬ ಆಕಾಂಕ್ಷೆ ಇತ್ತು.

ADVERTISEMENT

ದಿನದಿಂದ ದಿನಕ್ಕೆ ಕರಾಟೆಯ ಬಗ್ಗೆ ಗಮನ ಮುಂದುವರಿದ ಕಾರಣ ಪೋಷಕರು ಅದಕ್ಕೆ ಸಮ್ಮತಿಸಿದರು. ಅದರಂತೆ ಕುಶಾಲನಗರದ ಕರಾಟೆ ಶಿಕ್ಷಕ ಮಹಮ್ಮದಿ ಅವರಲ್ಲಿ 1992ರಿಂದ ಕಠಿಣ ತರಬೇತಿಯನ್ನು ಪಡೆದು ಉತ್ತಮ ಕರಾಟೆ ವಿದ್ಯಾರ್ಥಿಯಾಗಿ ರೂಪು ಗೊಂಡು ಬ್ಲಾಕ್ ಬೆಲ್ಟ್ 4ನೇ ಡಾನ್(ಪಟ್ಟಿ) ಪಡೆದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯ ಗರಿಯನ್ನು ಬಾಚಿಕೊಂಡ ಹೆಗ್ಗಳಿಕೆ ಇವರದ್ದು.

ದಿನದಿಂದ ದಿನಕ್ಕೆ ತನ್ನ ಸಾಮರ್ಥ್ಯ ದಿಂದ ಮೈಸೂರು, ಬೆಂಗಳೂರು, ಮಂಗಳೂರುಗಳಲ್ಲಿ ನಡೆದ ರಾಜ್ಯಮಟ್ ಟವನ್ನು ಪ್ರತಿನಿಧಿಸಿದರಲ್ಲದೇ ಚೆನ್ನೈ, ಕೊಯಮತ್ತೂರು ಮುಂತಾದ ಕಡೆಗಳಲ್ಲಿ ನಡೆದ ಕರಾಟೆ ಟೂರ್ನಿಯಲ್ಲಿ ಭಾಗ ವಹಿಸಿ ಹಲವಾರು ಪ್ರಶಸ್ತಿ ಗಳಿಸಿದ್ದಾರೆ.

ನಂತರ ಇವರು ಕರಾಟೆಯನ್ನು ತನ್ನ ವೃತ್ತಿಯನ್ನಾಗಿಸಿ ಶಿಕ್ಷಕರಾಗಿ ರೂಪುಗೊಂಡು 2000ನೇ ಸಾಲಿನಿಂದ ನೂರಾರು ವಿದ್ಯಾರ್ಥಿಳಿಗೆ ತರಬೇತಿಯ ಮೂಲಕ ಶಾಲಾ– -ಕಾಲೇಜಿಗೆ ಕೀರ್ತಿ ತರುವಂತೆ ಮಾಡಿದ್ದಾರೆ.

ರಾಷ್ಟ್ರಮಟ್ಟದ ಕರಾಟೆ ಟೂರ್ನಿಗೆ ತರಬೇತುದಾರರಾಗಿ ತೆರಳಿ ಕೊಡಗಿನ ಕೀರ್ತಿಯನ್ನು ಉತ್ತುಂಗಶಿಖರಕ್ಕೆ ಮುಟ್ಟಿಸಿದ ಕೀರ್ತಿ ಇವರದ್ದು. ಕೊಡಗಿನಿಂದ ಶಾಲಾ ಕ್ರೀಡಾಕೂಟದಲ್ಲಿ ಇಲ್ಲಿನ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಓಮರ್ ಆಲಿಯು ಭೂಪಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಟೂರ್ನಿಗೆ ಆಯ್ಕೆಯಾಗಿದ್ದು ಇವರ ಸಾರಥ್ಯದಲ್ಲಿಯೇ.
ಸುನಿಲ್ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.