ADVERTISEMENT

ಜಿಲ್ಲೆಯಲ್ಲಿ ತರಕಾರಿ ಬೆಲೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 11:00 IST
Last Updated 6 ಮಾರ್ಚ್ 2015, 11:00 IST

ಮಡಿಕೇರಿ:  ಜಿಲ್ಲೆಯಲ್ಲಿ ತರಕಾರಿ ಬೆಲೆ ಗ್ರಾಹಕರ ಕೈಗೆಟಕುವಂತಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈಗ ಬೆಲೆ ಇಳಿಕೆ ಕಂಡಿದೆ. ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬೀನ್ಸ್‌, ಟೊಮೆಟೊ, ಬೀಟ್‌ರೂಟ್‌, ಕ್ಯಾಬೇಜ್‌ ಸೇರಿದಂತೆ ಹಲವು ತರಕಾರಿಯ ಬೆಲೆಗಳು ಇಳಿಮುಖವಾಗಿವೆ.
ಫೆಬ್ರುವರಿ ತಿಂಗಳಿನಿಂದಲೂ ತರಕಾರಿ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗುತ್ತಿದ್ದು. ಈ ತಿಂಗಳು ಗ್ರಾಹಕರಿಗೆ ತರಕಾರಿ ಅಗ್ಗದ ಬೆಲೆಗೆ ದೊರಕುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ತರಕಾರಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರು ಇದೀಗ ನಿರಾಳರಾಗಿದ್ದಾರೆ.

ನೆರೆಯ ಹಾಸನ, ಮೈಸೂರು ಜಿಲ್ಲೆಗಳ ರೈತರು ಜನವರಿ–ಫೆಬ್ರುವರಿ ತಿಂಗಳಿನಲ್ಲಿ ಬೆಳೆದ ತರಕಾರಿ ಫಸಲು ಈಗ ಮಾರುಕಟ್ಟೆಗೆ ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ತರಕಾರಿ ಸರಬರಾಜು ಆಗುತ್ತಿರುವುದರಿಂದ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.

ತರಕಾರಿ ದರ ಹೀಗಿದೆ (ಪ್ರತಿ ಕೆ.ಜಿಗೆ ₨)
ಬೀನ್ಸ್ 28

ಬೆಳ್ಳಾರಿ 16
ಬೆಂಡೆ 30
ಬೀಟ್‌ರೂಟ್‌ 20
ಕ್ಯಾಬೆಜ್‌ 16
ಕುಂಬಳ 20
ಮೂಲಂಗಿ 20
ಕ್ಯಾಪ್ಸಿಕಂ 40
ಸೌತೆಕಾಯಿ 28
ಹೂಕೋಸು 20
ಕ್ಯಾರೆಟ್‌ 28

ಬದನೆ 30
ಹಾಗಲ 30
ಹೀರೆಕಾಯಿ 30
ಅಲಸಂದೆ 30
ಸೋರೆಕಾಯಿ 20
ಟೊಮೆಟೊ 10
ಈರುಳ್ಳಿ 20
ನುಗ್ಗೆಕಾಯಿ 60
ಹಸಿಮೆಣಸು 30

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.