ADVERTISEMENT

ಕೆರೆ ಸಂರಕ್ಷಣೆ ಎಲ್ಲರ ಹೊಣೆ

ರಾಯಲ್ಪಾಡ್‌ನಲ್ಲಿ ಕೆರೆ ಅಭಿವೃದ್ಧಿ ಕುರಿತು ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:55 IST
Last Updated 24 ಮಾರ್ಚ್ 2017, 4:55 IST

ಶ್ರೀನಿವಾಸಪುರ: ‘ಕೆರೆಗಳ ಸಂರಕ್ಷಣೆ ಎಲ್ಲರ ಹೊಣೆ. ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯಲ್ಲಿ ಮಳೆ ಪ್ರಮುಖ ಜಲ ಮೂಲವಾಗಿದೆ. ಮಳೆ ನೀರು ಸಂಗ್ರಹವಾಗಲು ಕೆರೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯ್‌ ಕುಮಾರ್‌ ನಾಗನಾಳ ಹೇಳಿದರು.

ತಾಲ್ಲೂಕಿನ ರಾಯಲ್ಪಾಡ್‌ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಗುರುವಾರ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಯಲ್ಪಾಡ್‌ ಸಮೀಪದ ರಾಮಸ್ವಾಮಿ ಕೆರೆ ಅಭಿವೃದ್ಧಿಗೆ ನಮ್ಮ ಕೆರೆ ಯೋಜನೆಯಡಿ ₹ 15 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

  ಕೆರೆಯಲ್ಲಿ ಹೂಳು ತೆಗೆಯುವುದು, ತೂಬು ದುರಸ್ತಿ ಮಾಡುವುದು, ಗಿಡಗಂಟಿಗನ್ನು ಕಿತ್ತು ಸ್ವಚ್ಛಮಾಡುವುದು, ಮಳೆ ನೀರು ಕೆರೆಗೆ ಹರಿದು ಬರಲು ಪೋಷಕ ಕಾಲುವೆ ನಿರ್ಮಿಸುವುದು ಈ ಯೋಜನೆಯಲ್ಲಿ ಸೇರಿದೆ. ಮಳೆ ನೀರು ಸಂಗ್ರಹ ಇಂದಿನ ಅಗತ್ಯವಾಗಿದೆ. ಮನೆ ಚಾವಣಿ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

  ತಾಲ್ಲೂಕು ಪಂಚಾಯಿತಿ ಸದಸ್ಯ ಆರ್‌.ವಿ.ನರೇಶ್‌ ಮಾತನಾಡಿ, ನೈಸರ್ಗಿಕ ಸಂಪನ್ನೂಲ ರಕ್ಷಣೆಗೆ ಸಮಾಜ ಕೈಜೋಡಿಸಬೇಕು. ಕೆರೆಗಳು ಬಯಲು ಸೀಮೆಯ ಜನರ  ಜೀವನಾಡಿಯಾಗಿದ್ದು, ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಅವುಗಳ ಪುನಶ್ಚೇತನಕ್ಕೆ ಮುಂದೆ ಬರಬೇಕು ಎಂದು ಹೇಳಿದರು.

ರಾಮಸ್ವಾಮಿ, ಸಿ.ಎಸ್.ವಿಶ್ವನಾಥ ಶಾಸ್ತ್ರಿ, ಮಂಜುನಾಥರೆಡ್ಡಿ, ಆರ್‌.ಗಂಗಾಧರ್‌, ಆರ್‌.ವಿ.ಬಾಬು ರೆಡ್ಡಿ, ಸಿಮೆಂಟ್ ನಾರಾಯಣಸ್ವಾಮಿ, ಸುರೇಶ್‌ ಶೆಟ್ಟಿ, ಡಿ.ಸಿ.ಅಪ್ಪಲ್ಲ, ಗಂಗಾರಿ ನಾರಾಯಣಸ್ವಾಮಿ, ಯಂಡಗುಟ್ಟಪಲ್ಲಿ ಸುಬ್ಬರೆಡ್ಡಿ, ವೈ.ವಿ.ಶಿವಾರೆಡ್ಡಿ, ರೆಡ್ಡಪ್ಪ, ನಾಗರಾಜ, ಲಕ್ಷ್ಮಿನಾರಾಯಣಶೆಟ್ಟಿ, ಆರ್‌.ಜಿ. ಮಂಜುನಾಥರೆಡ್ಡಿ ಅವರನ್ನು ಕೆರೆ ಅಭಿವೃದ್ಧಿ ಸಮತಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಪಟೇಲ್‌ ರಾಮಿರೆಡ್ಡಿ, ದಿನ್ನೆ ಪಾಪಯ್ಯಶೆಟ್ಟಿ, ಜಂಗಮೋಳ್ಳ ಅಪ್ಪಲ್ಲ, ಶ್ರೀರಾಮರೆಡ್ಡಿ, ಸಿ.ಎಸ್‌.ಲೋಕೇಶ್‌ ಕುಮಾರ್, ಬೈಯ್ಯಾರೆಡ್ಡಿ, ಕಿರಣ್‌ ಕುಮಾರ್‌, ಗಂಗಿರೆಡ್ಡಿ, ನಾಮಾಲು ಮಂಜುನಾಥರೆಡ್ಡಿ, ರಮೇಶ್‌್, ಚೌಡರೆಡ್ಡಿ, ಪದ್ಮಜ, ಮುನಿರತ್ನಮ್ಮ, ಶೋಭಮ್ಮ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.