ADVERTISEMENT

ಈದ್ಗಾ ಮೈದಾನ ಅಭಿವೃದ್ಧಿಗೆ ₹15 ಲಕ್ಷ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 7:19 IST
Last Updated 3 ಸೆಪ್ಟೆಂಬರ್ 2017, 7:19 IST

ಮಸ್ಕಿ: ‘ಮುಸ್ಲಿಂ ಸಮಾಜದ ಪ್ರಾರ್ಥನಾ ಕೇಂದ್ರವಾದ ಈದ್ಗಾ ಮೈದಾನ ಅಭಿವೃದ್ಧಿಗೆ ಸರ್ಕಾರ ₹15 ಲಕ್ಷ ಬಿಡುಗಡೆ ಮಾಡಿದೆ’ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.ಬಕ್ರೀದ್‌ ಹಬ್ಬದ ನಿಮಿತ್ತ ಶನಿವಾರ ಇಲ್ಲಿಯ ಬೆಟ್ಟದ ಮೇಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

ಶಾಸಕರ ಅನುದಾನದಲ್ಲಿ ಈಗಾಗಲೇ ಈದ್ಗಾ ಅಭಿವೃದ್ಧಿಗೆ 5 ಲಕ್ಷ ನೀಡಲಾಗಿದೆ. ಇದೀಗ ಸರ್ಕಾರ ವಕ್ಫ್‌ ಮಂಡಳಿ ಮೂಲಕ ₹ 15 ಲಕ್ಷ ಬಿಡುಗಡೆ ಮಾಡಿದ್ದು, ಅಭಿವೃದ್ದಿ ಕೆಲಸ ಚುರುಕುಗೊಳಿಸುವಂತೆ ತಿಳಿಸಿದರು. ಮಸ್ಕಿ ಕ್ಷೇತ್ರದ ಉಳಿದ ಗ್ರಾಮಗಳಲ್ಲಿನ ಈದ್ಗಾ ಮೈದಾನ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ಹಿತಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದರು.

ADVERTISEMENT

ಮುಸ್ಲಿಂ ಧರ್ಮಗುರು ಜಿಲಾನಿ ಖಾಜಿ, ಪರ್ತಕರ್ತ ಅಬ್ದುಲ್‌ ಅಜೀಜ್‌ ಮಾತನಾಡಿದರು. ಅಬ್ದುಲ್‌ ಗನಿ, ಬಾಹರ ಅಲಿ, ಡಾ. ಅಹ್ಮದಸಾಬ, ಮಸೂದ್ ಪಾಷಾ, ಚಾಂದ್‌ ಶೆಡಮಿ, ಡಾ. ಬಿ.ಎಚ್‌. ದಿವಟರ್‌, ದೊಡ್ಡಪ್ಪ ಕಡಬೂರು, ಚೇತನ ಪಾಟೀಲ, ಯುವ ಕಾಂಗ್ರೆಸ್‌ ಮಸ್ಕಿ ಕ್ಷೇತ್ರದ ಅಧ್ಯಕ್ಷ ವೀರೇಶ ಕಮತರ, ಶ್ರೀಧರ ಕಡಬೂರು ಇದ್ದರು.
ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.