ADVERTISEMENT

ಕೊಳವೆ ಒಡೆದು ಶೌಚಾಲಯದ ನೀರು ಕೆರೆಗೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:26 IST
Last Updated 16 ಮೇ 2017, 6:26 IST
ಮಾಗಡಿ  ತಾಲ್ಲೂಕಿನ ಪರಂಗಿಚಿಕ್ಕನ ಪಾಳ್ಯದ  ಭಾರ್ಗಾವತಿ ಕೆರೆಯಲ್ಲಿ ನಿರ್ಮಿಸಿರುವ ಒಳಚರಂಡಿ ಕೊಳವೆ
ಮಾಗಡಿ ತಾಲ್ಲೂಕಿನ ಪರಂಗಿಚಿಕ್ಕನ ಪಾಳ್ಯದ ಭಾರ್ಗಾವತಿ ಕೆರೆಯಲ್ಲಿ ನಿರ್ಮಿಸಿರುವ ಒಳಚರಂಡಿ ಕೊಳವೆ   

ಮಾಗಡಿ: ಪರಂಗಿ ಚಿಕ್ಕನಪಾಳ್ಯದ ಬಳಿ ಇರುವ ಕರ್ನಾಟಕ ನಗರ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಿರುವ  ಕೊಳವೆ ಒಡೆದು  ಪಟ್ಟಣದ ಶೌಚಾಲ ಯದ ಕಲು ಷಿತ ನೀರು ಭಾರ್ಗಾವತಿ ಕೆರೆ ಸೇರುತ್ತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಾಲಕ್ಕಯ್ಯ ದೂರಿದರು.

ಒಳಚರಂಡಿ ವೆಟ್‌ವೆಲ್‌ ಕೊಳವೆ ಒಡೆದು ಕಲುಷಿತ ನೀರು ಕೆರೆ ಸೇರುತ್ತಿರುವುದರಿಂದ ಸುತ್ತಮುತ್ತ ದುರ್ಗಂಧ ಬೀರುತ್ತಿದೆ. ಕೆರೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯರ ಕೈಕಾಲಿನ ಮೇಲೆ ಗುಳ್ಳೆಗಳಾಗಿದ್ದು, ಉರಿಕಾಣಿಸಿಕೊಂಡಿದೆ.

ಐತಿಹಾಸಿಕ ಹಿನ್ನೆಲೆ: ಇಮ್ಮಡಿ ಕೆಂಪೇಗೌಡ ತನ್ನ ಪತ್ನಿ ಭಾರ್ಗಾವತಿಯ ಸವಿನೆನಪಿಗಾಗಿ ನಿರ್ಮಿಸಿರುವ ಚಾರಿತ್ರಿಕ ಕೆರೆಯ ನೀರು ಕಲುಷಿತ ಗೊಂಡಿ ರುವುದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದೆ. ಕೆರೆಯ ನೀರು ಕುಡಿದ ದನಕರುಗಳು ಸಹ ರೋಗಕ್ಕೆ ತುತ್ತಾಗಿವೆ. ಪುರಸಭೆ ವ್ಯಾಪ್ತಿಯ ಶೌಚಾಲಯದ ಕಲುಷಿತ ನೀರನ್ನು ಕೆರೆಗೆ ಹರಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈ ಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ADVERTISEMENT

ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಡೆಗಟ್ಟದಿದ್ದರೆ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಗತಿಪರ ಹೋರಾಟಗಾರರಾದ ರತ್ನಮ್ಮ ತಿಳಿಸಿದ್ದಾರೆ.

ಪುರಸಭೆಯಲ್ಲಿ ಮುಖ್ಯಾಧಿಕಾರಿ ಮತ್ತು ಜವಾಬ್ದಾರಿಯುವ ಅಧಿಕಾರಿಗಳು ಇಲ್ಲದೆ ಗ್ರಾಮೀಣ ಜನತೆಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸೀನಪ್ಪ ತಿಳಿಸಿದ್ದಾರೆ.
ಪರಂಗಿ ಚಿಕ್ಕನಪಾಳ್ಯದ ಸುತ್ತಮುತ್ತ ದುರ್ಗಂಧದ ಜೊತೆ ಸೊಳ್ಳೆ ಮತ್ತು ಹೆಗ್ಗಣಗಳ ಉಪಟಳ ಹೆಚ್ಚಿದೆ ಎಂದು ಶ್ರೀನಿವಾಸ್‌ ಈ ಸಂದರ್ಭದಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.