ADVERTISEMENT

ರಸಪ್ರಶ್ನೆ: ಮಾಗಡಿ ತಂಡಕ್ಕೆ ಪ್ರಶಸ್ತಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:47 IST
Last Updated 2 ಫೆಬ್ರುವರಿ 2017, 6:47 IST
ರಸಪ್ರಶ್ನೆ: ಮಾಗಡಿ ತಂಡಕ್ಕೆ ಪ್ರಶಸ್ತಿ
ರಸಪ್ರಶ್ನೆ: ಮಾಗಡಿ ತಂಡಕ್ಕೆ ಪ್ರಶಸ್ತಿ   

ರಾಮನಗರ: ‘ರಸಪ್ರಶ್ನೆ ಕಾರ್ಯಕ್ರಮ ಉತ್ತಮ ಅಂಕ ಗಳಿಸುವಲ್ಲಿ ನೆರವಾಗುತ್ತದೆ’ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಲು ರಸಪ್ರಶ್ನೆ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ವಿಸ್ತರಣೆಗೂ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಇಂದು ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಓದಿ ಮನನ ಮಾಡಿದರೆ ಸಾಕು. ಬೇರೆ ಬೇರೆ ಗೈಡ್‌ಗಳಿಗೆ ಮಾರುಹೋಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುವುದು ಬೇಡ’ ಎಂದ ಕಿವಿಮಾತು ಹೇಳಿದರು. ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಮುಂದೆ ಯಾವುದೇ ಒಂದು ಉನ್ನತ ಶಿಕ್ಷಣಕ್ಕೆ ಹೋಗಬೆಕಾದರೆ ಎಸ್ಸೆಸ್ಸೆಲ್ಸಿ ಅಂಕಗಳು ಸಹಕಾರಿಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಓದಿನತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ರಾಜಶೇಖರ್‌, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಬಸವರಾಜಪ್ಪ, ಶಿಕ್ಷಕರಾದ ಟಿ.ಸಿ.ಕೆ.ರಾಜು, ಎಂ.ಎನ್‌. ದೇವರಾಜು, ಪ್ರಭುಲಿಂಗಸ್ವಾಮಿ, ಶಿವಸ್ವಾಮಿ, ಪ್ರಸಾದ್‌, ವೆಂಕಟೇಶ್‌ಮೂರ್ತಿ, ಸಮಾಜ ಸೇವಕರಾದ ಎಂ.ಸಿ. ರಂಗಸ್ವಾಮಿ, ಮಾಯಗಾನಹಳ್ಳಿಸುರೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.