ADVERTISEMENT

ವರುಣ ಪರ್ವ ಮಹಾಯಾಗ, ರುದ್ರಾಭಿಷೇಕ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:42 IST
Last Updated 22 ಮಾರ್ಚ್ 2017, 9:42 IST
ಮಾಗಡಿ  ಪಟ್ಟಣದ ಜಡೆದೇವರ ಮಠದಲ್ಲಿ ಸೋಮವಾರ ನಡೆದ ವರುಣ ಪರ್ವಮಹಾಯಾಗ ಹಾಗೂ ಏಕಾದಶರುದ್ರಾಭಿಷೇಕಕ್ಕೆ ಶಾಸಕ ಎಚ್‌.ಸಿ,ಬಾಲಕೃಷ್ಣ ಯಾಗಮಂಟಪದ ಪ್ರವೇಶ ದ್ವಾರ ಉದ್ಘಾಟಿಸಿದರು
ಮಾಗಡಿ ಪಟ್ಟಣದ ಜಡೆದೇವರ ಮಠದಲ್ಲಿ ಸೋಮವಾರ ನಡೆದ ವರುಣ ಪರ್ವಮಹಾಯಾಗ ಹಾಗೂ ಏಕಾದಶರುದ್ರಾಭಿಷೇಕಕ್ಕೆ ಶಾಸಕ ಎಚ್‌.ಸಿ,ಬಾಲಕೃಷ್ಣ ಯಾಗಮಂಟಪದ ಪ್ರವೇಶ ದ್ವಾರ ಉದ್ಘಾಟಿಸಿದರು   

ಮಾಗಡಿ:  ಜಡೆದೇವರ ಮಠಾಧೀಶರ ಮಹದಾಸೆಯಂತೆ ಮಳೆ ಬೆಳೆಯಾಗಿ ಜನತೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿ  ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಜಡೆದೇವರ ಮಠದಲ್ಲಿ ಸೋಮವಾರ ಲೋಕ ಕಲ್ಯಾರ್ಥವಾಗಿ ನಡೆದ ವರುಣ ಪರ್ವ ಮಹಾಯಾಗ ಹಾಗೂ ಏಕಾದಶ ರುದ್ರಾಭಿಷೇಕ ಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ವಾನ್‌ ಮಹದೇವ ಶಾಸ್ತ್ರಿ ಮಾತನಾಡಿ, ತಾಲ್ಲೂಕಿನಲ್ಲಿ ಪಶುಪಕ್ಷಿ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ. ವರುಣ ದೇವನ ಕೃಪೆಗಾಗಿ ವರುಣ ಪರ್ವ ಮಹಾಯಾಗ ನಡೆಯುತ್ತಿದೆ ಎಂದರು.

ವೀರಶೈವ ಮಂಡಳಿಯ ಅಧ್ಯಕ್ಷ ರುದ್ರಮೂರ್ತಿ, ನಟರಾಜು, ಆನಂದಪ್ಪ, ಪುರಸಭೆ ಸದಸ್ಯೆ ಶಿವರುದ್ರಮ್ಮ ವಿಜಯಕುಮಾರ್‌, ಉಮಮಹೇಶ್ವರ ಸ್ವಾಮಿ ಮಾತನಾಡಿದರು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮಿ ಮಾತನಾಡಿದರು.

ಅಕ್ಕಮಹಾದೇವಿ ಮಹಿಳಾ ಸಮಾಜ, ವೀರಶೈವ ಯುವಜನ ಸಂಘ ಮತ್ತು ವೀರಶೈವ ಮಂಡಳಿಯ  ಪದಾಧಿಕಾರಿಗಳು, ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.