ADVERTISEMENT

ವಾಹನದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 10:24 IST
Last Updated 28 ಮಾರ್ಚ್ 2015, 10:24 IST

ಕನಕಪುರ: ಬೆಂಗಳೂರು ಹಾಲು ಒಕ್ಕೂಟ ತನ್ನ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿ, ಮನೆ ಮನೆಗೆ ವಾಹನದ ಮೂಲಕ ಮಾರಾಟ ಮಾಡುವ ನೂತನ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್.ಪಿ. ರಾಜಕುಮಾರ್ ಹೇಳಿದರು. 

ನಗರದ ಮಳಗಾಳುವಿನಲ್ಲಿರುವ ಬೆಂಗಳೂರು ಹಾಲು  ಒಕ್ಕೂಟದ  ತಾಲ್ಲೂಕು ಶಿಬಿರ ಕಚೇರಿ ಮುಂಭಾಗ ಗ್ರಾಮೀಣ ಮಾರುಕಟ್ಟೆಯ  ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ನಂದಿನಿ ಉತ್ಪನ್ನಗಳಾದ ತುಪ್ಪ, ಜಾಮೂನು ಮಿಕ್ಸ್, ಪೇಡಾ, ಪನ್ನೀರು, ಪಾಯಸ ಮಿಕ್ಸ್, ಲಾಡು, ರಸಗುಲ್ಲ, ಮೈಸೂರ್ ಪಾಕ್, ಸೇರಿದಂತೆ  60 ಬಗೆಯ ತಿನಿಸುಗಳನ್ನು ಸಂಸ್ಥೆಯ ತಯಾರು ಮಾಡುತ್ತಿದ್ದು ಈ ತಿನಿಸುಗಳನ್ನು ವಾಹನದ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ರೈತರ ಮನೆಬಾಗಿಲಿಗೆ ತಲುಪಿಸಲಿದೆ ಎಂದರು.

ತಾಲ್ಲೂಕು ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ವರದರಾಜು ಮಾತನಾಡಿ ಮಾರುಕಟ್ಟೆಯಲ್ಲಿ ಈಗಾಗಲೇ ನಂದಿನ ಉತ್ಪನ್ನಗಳು ದೊರೆಯುತ್ತಿವೆ ಎಂದರು. ಸಹಾಯಕ  ವ್ಯವಸ್ಥಾಪಕರುಗಳಾದ  ಒಬ್ಬಜ್ಜ ಮತ್ತು ಡಾ. ಪ್ರಕಾಶ್, ವಿಸ್ತರಣಾಧಿಕಾರಿಗಳಾದ ನಂಜುಂಡಯ್ಯ, ರವೀಂದ್ರ, ಪಳನಿಸ್ವಾಮಿ, ಮತ್ತು ಗುರುರಾಜು, ಕಚೇರಿ ಸಹಾಯಕರಾದ ಮುತ್ತುರಾಜು, ಸೋಮು, ಸಹಾಯಕರಾದ ಲೋಕೇಶ್, ಉಮೇಶ್, ದ್ಯಾಪೇಗೌಡನ ದೊಡ್ಡಿ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.