ADVERTISEMENT

₹50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 9:20 IST
Last Updated 4 ನವೆಂಬರ್ 2017, 9:20 IST

ಮಾಗಡಿ: ಪಟ್ಟಣದ ತಿರುಮಲೆ ಚೌಡೇಶ್ವರಿ ದೇವಾಲಯದ ಬಳಿ ಸುಸಜ್ಜಿತ ಚೌಡೇಶ್ವರಿ ಸಮುದಾಯ ಭವನವನ್ನು ಆರು ತಿಂಗಳೊಳಗೆ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘ ಏರ್ಪಡಿಸಿದ್ದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಮುದಾಯ ಭವನಕ್ಕೆ ಶಾಸಕ ಭೈರತಿ ಬಸವರಾಜು ₹ 5ಲಕ್ಷ ಮಂಜೂರು ಮಾಡಿದ್ದಾರೆ. ₹50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣದಲ್ಲಿನ ವಸತಿ ರಹಿತರಿಗೆ ವಿತರಿಸಲು 500 ಮನೆಗಳು ಮಂಜೂರಾಗಿವೆ. ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಅರ್ಹ ಪಲಾನುಭವಿಗಳಿಗೆ ಲಾಟರಿ ಮೂಲಕ ಮನೆಯ ಹಕ್ಕುಪತ್ರ ವಿತರಿಸುವುದಾಗಿ ತಿಳಿಸಿದರು.

ಪುರಸಭಾಧ್ಯಕ್ಷೆ ಹೊಂಬಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಎಸ್.ಮಹದೇವ್, ಸುಶೀಲಮ್ಮ ರಂಗಹನುಮಯ್ಯ, ತಿರುಮಲೆ ರಾಮಲಿಂಗ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ರಮೇಶ್, ಪುಟ್ಟಶಂಕರಪ್ಪ, ರವಿಕುಮಾರ್, ನರಸಿಂಹಮೂರ್ತಿ ಪದ್ಮನಾಭ್, ಗೋವಿಂದರಾಜು, ಎಸ್.ಡಿ ನರಸಿಂಹಮೂರ್ತಿ, ಕುಮಾರ್, ಅಶ್ವಥ್, ವೆಂಟಕೇಶ್, ರಂಗಣ್ಣ, ದೇವರಾಜು  ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.