ADVERTISEMENT

ಕಾರ್ಕಳ: ಅಕ್ಷರ ಜಾತ್ರೆಗೆ ತೆರೆ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:24 IST
Last Updated 6 ಫೆಬ್ರುವರಿ 2017, 5:24 IST

ಕಾರ್ಕಳ: ತಾಲ್ಲೂಕಿನ ಬೆಳ್ಮಣ್ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ  ಶನಿವಾರ ನಡೆದ 13ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಸಮಾ ರೋಪ ಸಮಾರಂಭದಲ್ಲಿ ಸಾಹಿತಿ ಜ್ಯೋತಿ ಗುರುಪ್ರಸಾದ್ ಸಮಾರೋಪ ಭಾಷಣ ಮಾಡಿದರು.

ಮಾಜಿ ಶಾಸಕ ಎಚ್.ಗೋಪಾಲ ಭಂಡರಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾರ್ಕಳದ ಕೊಡುಗೆ ಮಹತ್ತರ ವಾಗಿದೆ. ಕನ್ನಡ ಭಾಷೆ ಸಂಸ್ಕೃತಿಗಾಗಿ ಹಾಗೂ ಕನ್ನಡದ ಉಳಿವಿಗಾಗಿ ಪ್ರತಿಯೊ ಬ್ಬರೂ ಜಾಗೃತರಾಗಬೇಕಾಗಿದೆ. ಕನ್ನಡ ಮಾಧ್ಯಮದಲ್ಲೆ ಕಲಿತವರು ಇವತ್ತು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಪಿ.ಬಾಲಕೃಷ್ಣ ಆಳ್ವ ಮುಂಡ್ಕೂರು (ವೈದ್ಯಕೀಯ), ಡಾ.ಪ್ರಕಾಶ್ ಶೆಣೈ (ಸಂಗೀತ), ಉರ್ಬನ್ ಡಿಸೋಜ ಬೆಳ್ಮಣ್ (ಪ್ರಗತಿಪರ ಕೃಷಿ), ಶೋಭಾ ಆಚಾರ್ಯ (ಗುಡಿ ಕೈಗಾರಿಕೆ), ಶ್ರೀಕರ ಭಟ್ ಈದು ಹೊಸ್ಮಾರು (ಮಾಧ್ಯಮ), ವಿಶ್ವನಾಥ ಅಡ್ಯಂತಾಯ (ಯಕ್ಷಗಾನ), ಅನು ಬೆಳ್ಳೆ, ಬೆಳ್ಮಣ್ (ಸಾಹಿತ್ಯ), ಅಪ್ಪಿ ಮೊಲಿ (ಗ್ರಾಮೀಣ ಸೇವೆ), ರಾಮಯ್ಯ ಪ್ರಭು, ಮಂಜನಬೆಟ್ಟು ಮುಡಾರು (ನಾಟಿವೈದ್ಯ), ಬಿ.ಜಯಶೀಲ ಭಟ್ ಬೋಳ (ಶಿಕ್ಷಣ) ಬೆಳ್ಮಣ್ ಸ್ಪೋರ್ಟ್ಸ್‌ ಕ್ಲಬ್ (ಸಂಘಟನೆ) ಗೌರವಿಸಲಾಯಿತು.

ಸಮ್ಮೇಳನಾಧ್ಯಕ್ಷ ಡಾ.ಜಯಪ್ರಕಾಶ ಮಾವಿನಕುಳಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಪುರಸಭಾ ಧ್ಯಕ್ಷೆ ಅನಿತಾ ಅಂಚನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಹರಿದಾಸ ಬಿ.ಸಿ ರಾವ್ ಶಿವಪುರ, ಸಿಲ್ವೆಸ್ಟರ್ ಡಿಮೆಲ್ಲೋ, ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ನಾರಾಯಣ ಮಡಿ, ಅಜೆಕಾರು ಹೋಬಳಿ ಅಧ್ಯಕ್ಷ ಶೇಖರ ಅಜೆಕಾರು, ಬೆಳ್ಮಣ್‌ನ ಜಯಂತಿ ಶೆಟ್ಟಿ, ಹೆಬ್ರಿಯ ಸೀತಾರಾಮ ಹೆಬ್ಬಾರ್, ಬೈಲೂ ರಿನ ದಿನೇಶ್ ಶೆಟ್ಟಿ, ಬಜಗೋಳಿಯ ಸಂಜೀವ ದೇವಾಡಿಗ, ತಾಲ್ಲೂಕು ಘಟಕದ ಕಾರ್ಯದರ್ಶಿ ಸುಧಾಕರ ಶೆಣೈ, ಸುಧಾಕರ ಪೊಸ್ರಾಲು, ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಭಗಿನಿ ಲೂಸಿ ಪಿರೇರಾ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅನಿತಾ ಕಮಲಿನಿ, ಅರುಣ್ ರಾವ್ ಇದ್ದರು.

ಬೆಳಿಗ್ಗೆ ‘ನೂರರ ಸಂಭ್ರಮದಲ್ಲಿ ಕಾರ್ಕಳ ತಾಲ್ಲೂಕು’ ಅಂದು-ಇಂದು-ಮುಂದು ಗೋಷ್ಠಿಯಲ್ಲಿ ಮುನಿರಾಜ ರೆಂಜಾಳ ಮೂಡುಬಿದಿರೆ, ಸಿದ್ಧಾಪುರ ವಾಸುದೇವ ಭಟ್ ವಿಷಯ ಮಂಡಿಸಿದರು. ಮಧ್ಯಾಹ್ನ ಭುವನೇಂದ್ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ‘ಪುಣ್ಯಕೋಟಿ’ ರೂಪಕ ನಡೆಯಿತು.

ಕವಿಗೋಷ್ಠಿಯಲ್ಲಿ ದೇವದಾಸ್ ಕೆರೆಮನೆ, ಜಾಹ್ನವಿ ಸಂತೋಷ್, ನಾರಾಯಣ ಗವಲ್ಕರ್, ಗಣೇಶ್ ಜಾಲ್ಸೂರು, ಶಂಕರ್ ನೆಲ್ಯಾಡಿ, ಹರಿಪ್ರಸಾದ್ ನಂದಳಿಕೆ, ದಿನೇಶ್ ಕುಮಾರ್ ಮುಂಡ್ಕೂರು ಕವಿತೆಗಳನ್ನು ಪ್ರಸ್ತುತ ಪಡಿಸಿದರು. ನಂತರ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಲಾವಿದ ಗಣೇಶ್ ಗಂಗೊಳ್ಳಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು. ಶರತ್ ಶೆಟ್ಟಿ ಮುಂಡ್ಕೂರು ನಿರೂಪಿಸಿದರು. ಸಮ್ಮೇಳನ ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.