ADVERTISEMENT

ಬೆಂಗಳೂರು, ಬೆಳಗಾವಿ ವಿಭಾಗಕ್ಕೆ ಪ್ರಶಸ್ತಿ

ಉಡುಪಿ: ರಾಜ್ಯ ಮಟ್ಟದ ಯುವಜನ ಮೇಳದ ಸಾಂಸ್ಕೃತಿಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:04 IST
Last Updated 24 ಮೇ 2016, 5:04 IST

ಉಡುಪಿ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಡುಪಿಯಲ್ಲಿ ಆಯೋ ಜಿಸಿದ್ದ ರಾಜ್ಯ ಮಟ್ಟದ ಯುವಜನ ಮೇಳದ ಸಾಂಸ್ಕೃತಿಕ ಸ್ಪರ್ಧೆಗಳ ಪುರು ಷರ ವಿಭಾಗದಲ್ಲಿ ಬೆಂಗಳೂರು ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದವು.

ಪುರುಷರ ವಿಭಾಗದಲ್ಲಿ ಬೆಳಗಾವಿ ದ್ವಿತೀಯ ಹಾಗೂ ಮೈಸೂರು ವಿಭಾಗ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕಲಬುರಗಿ ಹಾಗೂ ಬೆಂಗ ಳೂರು ವಿಭಾಗ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿವೆ.

ಸ್ಪರ್ಧೆಗಳ ಫಲಿತಾಂಶ: ಭಾವಗೀತೆ; ಬೆಂಗಳೂರು ಗ್ರಾಮಾಂತರ ವಿಭಾಗದ ಗೋಪಾಲ ಸಣ್ಣಕ್ಕಿ 1, ಮಂಡ್ಯದ ಪವನ್ 2, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಾಮ 3. ರಂಗಗೀತೆ: ತುಮಕೂರಿನ ಅರುಣ್‌ ಕುಮಾರ್‌ 1, ಗೋಪಾಲ ಸಣ್ಣಕ್ಕಿ 2, ಧಾರವಾಡದ ಸತೀಶ್‌ ಶಿವಪ್ಪಯ್ಯ ಮಠ 3. ಲಾವಣಿ: ಕೊಪ್ಪಳದ ನಿಂಗಪ್ಪ ಸೊಲ್ಲಾಪುರ 1, ಬೆಂ.ಗ್ರಾ. ರಾಮು 2, ಗದಗದ ಮಹೇಶ್‌ ಜಗ್ಗಲ್‌ 3. ಗೀಗೀ ಪದ; ಕೊಪ್ಪಳದ ಮಾರುತೇಶ್ವರ ಯು ವಕ ಸಂಘ 1, ಉತ್ತರ ಕನ್ನಡದ ಜೈಹನು ಮಾನ್‌ ಯುವಕ ಸಂಘ 2, ಚಿಕ್ಕಬಳ್ಳಾ ಪುರದ ಸ್ವಾಮಿ ವಿವೇಕಾನಂದ ಕಲಾ ಬಳಗ 3. ಏಕಪಾತ್ರಾಭಿನಯ: ಕೊಪ್ಪ ಳದ ಸಿದ್ದು ಉಳ್ಳಾಗಡ್ಡಿ 1, ಧಾರವಾಡದ ಎಲ್ಲಪ್ಪ ಡಿ ಸುಳ್ಯದ 2, ಕೊಪ್ಪಳದ ಪ್ರಕಾಶ ಗೊಂಡಬಾಳ 3. ಭಜನೆ; ಧಾರವಾಡದ ಗುರುಶಾಂತೇಶ್ವರ ಕಲಾ ತಂಡ 1, ಹಾಸ ನದ ಜೇನುಕಲ್‌ ಸಿದ್ದೇಶ್ವರ ಯುವಕ ಸಂಘ 2, ಕೊಪ್ಪಳದ ಮಾರುತೇಶ್ವರ ಭಜನಾ ಸಂಘ 3. ಕೋಲಾಟ: ಚಿತ್ರ ದುರ್ಗದ ಶ್ರೀಕೃಷ್ಣ ಯುವಕ ಸಂಘ 1, ಉ.ಕ. ರಾಜೇಶ್ವರಿ ಯುವಕ ಮಂಡಳಿ 2, ಕೊಪ್ಪಳದ ಕರ್ನಾಟಕ ಯುವಕ ಮಂ ಡಳಿ 3. ವೀರಗಾಸೆ: ತುಮಕೂರಿನ ಕಲ್ಲೇ ಶ್ವರ ಯುವಕ ಸಂಘ 1, ಮೈಸೂರಿನ ಗೋವಿಂದ ನಾಯಕ ಮತ್ತು ತಂಡ 2, ಉ.ಕ. ಈಶ್ವರ ಯುವಕ ಮಂಡಲ 3.

ಡೊಳ್ಳುಕುಣಿತ: ಬಾಗಲಕೋಟೆಯ ಜುಮನಾಳ ಸಿದ್ದೇಶ್ವರ ಸಾಂಸ್ಕೃತಿಕ ಸಂಘ 1, ಶಿವಮೊಗ್ಗದ ಗಜಾನನ ಡೊಳ್ಳು ಸಂಘ 2, ಅಭಿನಯ ಹವ್ಯಾಸಿ ಜಾನಪದ ಸಂಘ ಉಡುಪಿ 3. ಜನಪದ ನೃತ್ಯ: ಗದಗ ಜಿಲ್ಲೆಯ ಜೈಕಿಸಾನ್‌ ಯುವಕ ಸಂಘ 1, ಮಂಡ್ಯದ ಹೊನ್ನಪ್ಪ ಮತ್ತು ತಂಡ 2, ಬೆಂ.ಗ್ರಾ. ಲಕ್ಷ್ಮೀನಾರಾ ಯಣ ತಂಡ 3. ಚರ್ಮವಾದ್ಯ ಮೇಳ: ಕೋಲಾರದ ಈ ಭೂಮಿ ತಮಟೆ ಕಲಾ ಸಂಘ ಹೊಸಹಳ್ಳಿ 1, ಉಡುಪಿಯ ಅಭಿ ನಯ ಹವ್ಯಾಸಿ ಜಾನಪದ ಸಂಘ 2, ಗದ ಗದ ವೀರಭದ್ರೇಶ್ವರ ಯುವಕ ಮಂಡಳಿ 3. ಸಣ್ಣಾಟ: ರಾಯಚೂರಿನ ಶ್ರೀಗುರು ಪುಟ್ಟರಾಜ್‌ ಸಾಂಸ್ಕೃತಿಕ ಸಂಘ 1, ದ.ಕ. ಮಿತ್ರ ಬಳಗ 2, ಬೆಳಗಾವಿಯ ಲಕ್ಷ್ಮೀ ದೇವಿ ಸಣ್ಣಾಟ ಕಲಾ ಸಂಘ 3. ದೊ ಡ್ಡಾಟ: ತುಮಕೂರಿನ ಕಲ್ಲೇಶ್ವರ ಯುವಕ ಸಂಘ 1, ಉ.ಕ. ಈಶ್ವರ ಯುವಕ ಮಂ ಡಲ. 2, ದ.ಕ ಮಿತ್ರ ಬಳಗ 3. ಯಕ್ಷ ಗಾನ: ಉಡುಪಿ ಜಿಲ್ಲೆಯ ವೈಭವ ಯುವಕ ಮಂಡಲ 1, ಉ.ಕ. ಯುವಶಕ್ತಿ ಯುವಕ ಸಂಘ 2.

ಮಹಿಳೆಯರ ವಿಭಾಗ: ಭಾವಗೀತೆ; ಬಳ್ಳಾ ರಿಯ ಎಚ್‌.ಎಂ. ಲಲಿತಾ 1, ಬೆಳ ಗಾವಿಯ ಪ್ರಿಯಾಂಕ ಅರೆಸಿದ್ದಿ 2, ಬೆ.ಗ್ರಾ ಸುವರ್ಣ 3. ರಂಗಗೀತೆ: ಗದಗ ಭಾಗ್ಯಶ್ರೀ 1, ಕೊಡಗು ಚಂದ್ರಕಲಾ 2, ಶಿವಮೊಗ್ಗ ಜಿ.ಎಸ್‌. ಗೀತಾ 3. ಲಾವಣಿ: ಉ.ಕ. ಆಶಾಲಕ್ಷ್ಮೀ ಕೊಂಡ್ಲಿ 1, ದ.ಕ. ಗುರು ಪ್ರಿಯ ನಾಯಕ್‌ 2, ಕೊಪ್ಪಳದ ಬಸವ ರಾಜೇಶ್ವರಿ 3. ಗೀಗೀಪದ: ಗದಗದ ಮಲಪ್ರಭೆ ಯುವತಿ ಮಂಡಳಿ 1, ಕೊಪ್ಪ ಳದ ಬನಶಂಕರಿ ಯುವತಿ ಮಂಡಳಿ 2, ದ.ಕ. ತಣ್ಣೀರು ಬಾವಿ ಯುವತಿ ಮಂಡಳಿ 3. ಏಕಪಾತ್ರಾಭಿನಯ: ದ.ಕ. ಕಾವ್ಯಶ್ರೀ 1, ದ.ಕ. ಶಿವರಂಜನಿ 2, ಉ.ಕ. ಅನು ಸೂಯ ಕೊಂಡ್ಲಿ 3. ಭಜನೆ: ಆಶಾಲಕ್ಷ್ಮೀ ಕೊಂಡ್ಲಿ 1, ಹಾಸನದ ಕಲಾ ಜ್ಯೋತಿ ಯುವತಿ ಮಂಡಳಿ 2, ಬೀದರ್‌ನ ಗಂಗಮ್ಮ ಮತ್ತು ಸಂಗಡಿಗರು 3.

ಕೋಲಾಟ: ಶಿವಮೊಗ್ಗದ ಕಿತ್ತೂರು ರಾಣಿ ಚೆನ್ನಮ್ಮ ಯುವತಿ ಮಂಡಳಿ 1, ಕೊಪ್ಪಳದ ರೇಣುಕಾ ಹಾಗೂ ಸಂಗಡಿಗರು 2. ಸೋಬಾನೆ ಪದ: ಉ.ಕ. ಲಕ್ಷ್ಮೀ ಯುವತಿ ಮಂಡಳಿ 1, ಬೀದರ್‌ ಉಮಾದೇವಿ ಮತ್ತು ಸಂಗಡಿಗರು 2, ಶಿವಮೊಗ್ಗದ ಶ್ರೀ ಶಕ್ತಿ ಜಾಗೃತ ಯುವತಿ ಮಂಡಳಿ 3. ಜನಪದ ನೃತ್ಯ: ಕೋಲಾ ರದ ವಿದ್ಯಾ ಮತ್ತು ತಂಡ 1,
ರಾಯಚೂರಿನ ಸ್ಫೂರ್ತಿ ಯುವತಿ ಮಂಡಳಿ 2. ಜನಪದ ಗೀತೆ: ಉ.ಕ. ಶ್ರೀದೇವಿ ಸಿದ್ದಾ ಪುರ ತಂಡ 1, ಚಿಕ್ಕಮಗಳೂರಿನ ಕಲಾ ಜ್ಯೋತಿ ಯುವತಿ ಮಂಡಳಿ 2, ಕೊಪ್ಪ ಳದ ಶಾರದಾ ಯುವತಿ ಮಂಡಳಿ 3. ರಾಗಿ/ಜೋಳ ಬೀಸುವ ಪದ: ಉ.ಕ. ದಾಕ್ಷಾಯಣಿ ಯುವತಿ ಮಂಡಳಿ 1, ಹಾಸನದ ಮಹೇಶ್ವರಿ ಯುವತಿ ಮಂಡಳಿ 2, ಶಿವಮೊಗ್ಗದ ಸ್ತ್ರೀಶಕ್ತಿ ಜಾಗೃತಿ ಯುವತಿ ಮಂಡಳಿ 3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.