ADVERTISEMENT

‘ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 5:26 IST
Last Updated 3 ಸೆಪ್ಟೆಂಬರ್ 2015, 5:26 IST

ಕಾರ್ಕಳ: ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಮೂಲಕ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಲ್ಲ ಮುಂಡ್ಕೂರು ಸರ್ವೋದಯ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಪಶುಪತಿ ಶಾಸ್ತ್ರಿ ತಿಳಿಸಿದರು.

ನಗರದ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪೆರ್ವಾಜೆ ಪ್ರೌಢಶಾಲೆಯಲ್ಲಿ ಈಚೆಗೆ ಇಂಚರ ಇಕೋ ಕ್ಲಬ್‌ನ ಆಶ್ರಯದಲ್ಲಿ ಉಪನ್ಯಾಸ ನೀಡಿದ ಅವರು ನಮ್ಮ ಪರಿಸರ ನಮ್ಮ ರಕ್ಷಣೆಗಾಗಿ ಇರುವ ಪರಿಸರವನ್ನು ನಾವೇ ರಕ್ಷಿಸಬೇಕು ಎಂದರು.

ಶಾಲಾ ಮುಖ್ಯಶಿಕ್ಷಕಿ ಕೆ. ಹರ್ಷಿಣಿ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾರ್ಗದರ್ಶಕ ಶಿಕ್ಷಕ ಜೋನ್ ಗೊಲ್ಬರ್ಟ್ ಮಿನೇಜಸ್, ಸಂಘದ ನಾಯಕ ಅಕ್ಷಯ್ ವೇದಿಕೆಯಲ್ಲಿದ್ದರು. ಆಕಾಶ್ ನಿರೂಪಿಸಿದರು. ರೋಹಿತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.