ADVERTISEMENT

ವಕೀಲ ವೃತ್ತಿ; ಮಹಿಳೆಯರು ವಿರಳ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಕೀಲೆ ಅಂಜಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:30 IST
Last Updated 9 ಮಾರ್ಚ್ 2017, 10:30 IST
ವಿಜಯಪುರ:  ಸಮಾಜದ ಎಲ್ಲ ವೃತ್ತಿ ರಂಗಗಳು ಒಂದಿಲ್ಲ ಒಂದು ರೀತಿಯಲ್ಲಿ ಬೆಳವಣಿಗೆ ಕಂಡರೆ ವಕೀಲ ವೃತ್ತಿ ಮಾತ್ರ ದಿನದಿಂದ ದಿನಕ್ಕೆ ಹಿಮ್ಮುಖವಾಗಿ ಬೆಳೆಯುತ್ತಿದೆ. ವಕೀಲ ವೃತ್ತಿಗೆ ಸೇರುತ್ತಿರುವ ಮಹಿಳೆಯರು ಸಂಖ್ಯೆ ವಿರಳವಾಗುತ್ತಿದೆ ಎಂದು ವಕೀಲರಾದ ಅಂಜಲಿ ರಾಮಣ್ಣ ಹೇಳಿದರು.
 
ಇಲ್ಲಿನ ಮಹಿಳಾ ವಿ.ವಿ.ದ ಡಾ.ಬಿ.ಆರ್.ಅಂಬೇಡ್ಕರ್‌ ಸಭಾ ಭವನದಲ್ಲಿ ಮಹಿಳಾ ಅಧ್ಯಯನ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ‘ವೃತ್ತಿನಿರತ ಮಹಿಳೆಯರ ಸವಾಲುಗಳು, -ಸಾಧನೆಗಳು’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
 
ಸುದ್ದಿ ವಾಹಿನಿಗಳಲ್ಲಿ ಪ್ರಮುಖ ವಿಷಯಗಳಿಗೆ ಪುರುಷ ವಕೀಲರನ್ನು ಹಾಗೂ ಕಡಿಮೆ ಮಹತ್ವ ಪಡೆದ ವಿಷಯಗಳಿಗೆ ಮಹಿಳಾ ವಕೀಲರನ್ನು ಚರ್ಚೆಗೆ ಕರೆಯುವ ರೀತಿ ಸರ್ವೇ ಸಾಮಾನ್ಯವಾಗಿದೆ. ಈ ಕಾರಣದಿಂದ ಮಹಿಳಾ ವಕೀಲರ ಮೇಲೆ ಕಕ್ಷಿದಾರರು ನಂಬಿಕೆ ಇಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. 
 
ಅಲ್ಲದೇ, ಕಾರ್ಪೊರೇಟ್ ಮಹಿಳಾ ವಕೀಲರನ್ನು ಜಾಗತಿಕರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚರ್ಚೆ ಹಾಗೂ ವಾದ, -ವಿವಾದಗಳಿಗೆ ಪುರುಷ ವಕೀಲರನ್ನು ಮುಂದೂಡುತ್ತಿದ್ದು, ಕೇವಲ ದಾಖಲಾತಿ ಗಳಂತಹ ಕೆಲಸಗಳಿಗೆ ಮಾತ್ರ ಮಹಿಳಾ ವಕೀಲರನ್ನು ಸೀಮಿತಗೊಳಿಸುತ್ತಿದ್ದಾರೆ ಎಂದರು. ವೆಂ.ವನಜಾ, ಮಾಯಾಚಂದ್ರ, ಡಾ.ರೇಣುಕಾ, ಸಾವಿತ್ರಿ ಅಥರ್ಗಾ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.