ADVERTISEMENT

ಕನಕ ಜಯಂತಿ: ಕುರಿಗಾಹಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 10:03 IST
Last Updated 9 ನವೆಂಬರ್ 2017, 10:03 IST

ಹುಣಸಗಿ: ಸಮೀಪದ ನಾರಾಯಣಪುರ ಗ್ರಾಮದಲ್ಲಿ ಕನಕದಾಸ ಯುವಕ ಮಂಡಳಿಯಿಂದ ಕನಕ ಜಯಂತಿಯನ್ನು ಈಚೆಗೆ ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಸಂತ ಕನಕದಾಸ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಡೊಳ್ಳು ಕುಣಿತದೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಅದ್ಧೂರಿಯಾಗಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ, ಸಿದ್ದಪ್ಪ ಕಮಲಾಪುರ, ಆಂಜನೇಯ ದೊರೆ, ಸುರೇಶ ಕುಂಟೋಜಿ, ಯಮನೂರಿ ಕಬಡರ, ರಮೇಶ ಕೋಳುರ, ಯಂಕಪ್ಪ ರೊಡಲಬಂಡಾ, ಮಂಜು ಹಾದಿಮನಿ, ಗದ್ದೆಪ್ಪ ಬಿರಾದಾರ, ನಾಗರಾಜ ಇದ್ದರು.

ಮೌನೇಶ್ವರ ಕ್ಯಾಂಪಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯಶಿಕ್ಷಕ ಬಸವರಾಜ ಕುಂಟೋಜಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶೇಖಸಾ ನದಾಫ್ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

ಜೋಗುಂಡಬಾವಿ: ಸಮೀಪದ ಜೋಗುಂಡಬಾವಿ ಗ್ರಾಮದಲ್ಲಿ  ಕನಕ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕನಕದಾಸ ಯುವಕ ಸಂಘದ ವತಿಯಿಂದ ಗ್ರಾಮದ 24 ಜನ ಕುರಿಗಾಹಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲನಗೌಡ, ಗಿರಿಯಪ್ಪ ಪೂಜಾರಿ, ಗದೆಪ್ಪ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಅಮರಣ್ಣ ಹುಡೇದ, ಅಮರಣ್ಣ ಕುಂಬಾರ, ವಿ.ಎಂ ಹಿರೇಮಠ, ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಾಜಿ ಚವ್ವಾಣ, ನಾಗಯ್ಯ ಹಿರೇಮಠ, ಯಲ್ಲಪ್ಪಗೌಡ ಗೌಡರ, ನಾಗಪ್ಪ ಕುಂಬಾರ, ಅಚ್ಚಪ್ಪ ಮಾಸ್ತರ, ಸೋಮಣ್ಣ ಮಾಮನಿ, ಕಂಠಯ್ಯ ಹಿರೇಮಠ, ಹಣಮಂತ ಗುರಿಕಾರ, ಶರಣು ಕುಂಬಾರ, ಬಾಲಪ್ಪ ಹಳ್ಳಿ, ದ್ಯಾಮಣ್ಣ ಕೊಡೇಕಲ್ಲ, ದೇವಿಂದ್ರಪ್ಪ ಕಿಲಾರಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.