ADVERTISEMENT

‘ದಲಿತರು ಇತಿಹಾಸ ತಿಳಿಯುವುದು ಅವಶ್ಯ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 9:23 IST
Last Updated 24 ಜನವರಿ 2017, 9:23 IST

ಸುರಪುರ: ‘ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರ ಹಾಗೂ ಶೋಷಣೆಗೆ ಮತ್ತು ತುಳಿತಕ್ಕೆ ಒಳಗಾದ ತಳ ಸಮುದಾಯದ ಪ್ರತಿಯೊಬ್ಬ ಕಾರ್ಯಕರ್ತರು ಪ್ರಾಚೀನ ಭಾರತದ ಇತಿಹಾಸದ ಬಗ್ಗೆ ಸ್ಪಷ್ಟವಾಗಿ ತಿಳಿಯದೆ ಹೋದರೆ ಮುಂದಿನ ದಿನಮಾನಗಳಲ್ಲಿ ದಲಿತರಿಗೆ ಸಮಸ್ಯೆಗಳು ಇನ್ನು ಹೆಚ್ಚಾಗಬಹುದು’ ಎಂದು ಕರ್ನಾಟಕ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಆರ್. ಮೋಹನರಾಜ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ರಾಜ್ಯ ಮತ್ತು ಯಾದಗಿರಿ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಅಧ್ಯಯನ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ದಲಿತ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಚಿಂತನ, ಮಂಥನ ನಡೆಸುವುದರಿಂದ ದಲಿತ ಸಮುದಾಯದ ಬೆಳವಣಿಗೆಗೆ ಉಪಯೋಗವಾಗುತ್ತದೆ’ ಎಂದು ತಿಳಿಸಿದರು.

ಚಿಂತಕ ಎಸ್.ಪಿ. ಚಂದ್ರಶೇಖರ ಮರಿಯಮ್ಮನಹಳ್ಳಿ ಅವರು ಭಾರತದ ಇತಿಹಾಸ ಕುರಿತು ವಿಷಯ ಮಂಡಿಸಿದರು. ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಡಾ. ಶ್ರೀನಿವಾಸ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಮತ್ತು ಆರ್.ಮೋಹನರಾಜ್ ಅವರು ಸಾವಿತ್ರಿ ಬಾಯಿ ಪುಲೆ, ಪೆರಿಯರ್, ನಾಲ್ವಡಿ ಕೃಷ್ಣರಾಜ ಒಡೆಯರ, ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದರು.

ಕದಸಂಸ ಭೀಮವಾದ ರಾಜ್ಯ ಘಟಕದ ಸಂಚಾಲಕ ಪರಶುರಾಮ ನೀಲನಾಯಕ ಅಧ್ಯಕ್ಷತೆ ವಹಿಸಿದ್ದರು. ಬೀದರದ ಭಂತೆ ಕಾಶಪ್ಪರವರು ಸಾನಿಧ್ಯ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕರಾದ ತಿಪ್ಪಣ್ಣ ಆರತಿ, ಗ್ಯಾನಪ್ಪ ಬಡಿಗೇರ, ರಾಜು ಎಂ. ತಳವಾರ, ಪಡಿಯಪ್ಪ ಬಾಗಲಕೋಟ, ಎಸ್‌.ಡಿ.ರಾಯಮಾನೆ, ಈರಣ್ಣ ಕಸನ್, ರಾಜ್ಯ ಸಮಿತಿ ಸದಸ್ಯರಾದ ಭೀಮರಾಯ ಸಿಂದಗೇರಿ, ಶ್ರೀಶೈಲ್ ಹೊಸಮನಿ ವೇದಿಕೆಯಲ್ಲಿದ್ದರು.

ಜಿಲ್ಲಾ ಸಮಿತಿಯ ಹೈಯಾಳಪ್ಪ ದೇವಕರ, ಮರಿಯಪ್ಪ ಕನ್ನೆಕೋಳೂರು, ಪರಶುರಾಮ ಹೊಸಮನಿ, ರಮೇಶ ಬಡಿಗೇರ, ತಾಲ್ಲೂಕು ಸಮಿತಿಯ ಜಯರಡ್ಡಿ ಹೊಸ್ಮನಿ, ಮಾನಪ್ಪ ಜೆಗ್ರಿ, ಮಲ್ಲಿಕಾರ್ಜುನ ವಾಗಣಗೇರಾ, ಕಾಶೀನಾಥ ಮಾಲಗತ್ತಿ, ರಮೇಶ ಮುಂಡಾಸ, ಶರಣು ಬೂತಾಳಿ, ಮರೆಪ್ಪ ಮೂಡಬುಳ, ಪಾರಪ್ಪ ದೇವತ್ಕಲ್, ಹಣಮಂತ ಕಟ್ಟಿಮನಿ, ಶೇಖರ ಮಂಗಳೂರು, ಬಸವರಾಜ ಶಾಖಾಪೂರ, ಜೀವನಕುಮಾರ ಜೀವಣಗಿ, ಶರಣು ಹಸನಾಪೂರ, ಆಕಾಶ ಕಟ್ಟಿಮನಿ, ರಾಮು ತೇಲಕರ್, ವಿವೇಕ, ರಾಮು ತಳವರಗೇರಾ, ಪರಶುರಾಮ, ಶರಣು, ಉಮೇಶ ಹುಲಿಮನಿ ಇತರರಿದ್ದರು.

ಶಿಬಿರದಲ್ಲಿ ಸಮಿತಿಯ ರಾಜ್ಯದ 18 ಜಿಲ್ಲೆಗಳ ಭೀಮವಾದ ಸಮಿತಿಯ 350 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ಘಟಕದ ಸಂಚಾಲಕ ರಾಹುಲ್ ಹುಲಿಮನಿ ಸ್ವಾಗತಿಸಿದರು. ಮರಲಿಂಗ ಅನವಾರ ನಿರೂಪಿಸಿದರು. ತಾಲ್ಲೂಕು ಘಟಕದ ಸಂಚಾಲಕ ಲಕ್ಷ್ಮಣ ಕಟ್ಟಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.