ADVERTISEMENT

‘ಸೈಕಲ್‌ ಸೌಲಭ್ಯದಿಂದ ಶೈಕ್ಷಣಿಕ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:57 IST
Last Updated 14 ಜುಲೈ 2017, 6:57 IST

ಯಾದಗಿರಿ: ‘ಸರ್ಕಾರ ಜಾರಿಗೊಳಿಸಿರುವ ಶೈಕ್ಷಣಿಕ ಯೋಜನೆಗಳನ್ನು ಸದುಪ ಯೋಗಪಡಿಸಿಕೊಳ್ಳಬೇಕು’ ಎಂದು ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ  ಬಸವ ರಾಜ ಪಾಟೀಲ ಕ್ಯಾತನಾಳ ಸಲಹೆ ನೀಡಿದರು. ಸಮೀಪದ ಸೈದಾಪುರದಲ್ಲಿನ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ಗುರುವಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿ ಸಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೈಕಲ್‌ ಅನ್ನು ಜೋಪಾನದಿಂದ ಬಳಕೆ ಮಾಡಬೇಕು. ಸೈಕಲ್‌ ತರಬೇತಿ ಇಲ್ಲದಿದ್ದರೆ ಮೊದಲು ತರಬೇತಿ ಹೊಂದಬೇಕು. ಜತೆಗೆ ರಸ್ತೆ ನಿಮಯಗಳ ಬಗ್ಗೆ ಜ್ಞಾನ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಂಸ್ಥೆ ಸಹ ಕಾರ್ಯದರ್ಶಿ ಮಲ್ಲಣ್ಣ ಗೌಡ ಮಾಲಿ ಪಾಟೀಲ ಮಾತನಾಡಿ, ‘ಮಕ್ಕಳ ಗುಣಾತ್ಮಕ ಕಲಿಕೆಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸರಿಯಾದ ಸದ್ಬಳಕೆಯಾಗ ಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಸೈಕಲ್ ಸೌಲಭ್ಯದಿಂದ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗುತ್ತದೆ. ಇದರ ಉಪಯೋಗದೊಂದಿಗೆ ನಾವು ಪ್ರಗತಿ ಸಾಧಿಸಿ ಪೋಷಕರಿಗೆ, ಶಿಕ್ಷಕರಿಗೆ, ಸಂಸ್ಥೆಗೆ ಉತ್ತಮ ಹೆಸರು ತರಬೇಕು’ ಎಂದು ಹೇಳಿದರು.

ADVERTISEMENT

ಮುಖ್ಯಗುರು ಲಿಂಗಾರಡ್ಡಿ ನಾಯಕ ಮಾತನಾಡಿ,‘ಹಾಜರಾತಿ ಹಾಗೂ ದಾಖ ಲಾತಿಯೊಂದಿಗೆ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಸರ್ಕಾರ ಸೈಕಲ್ ವಿತರಣೆ ಮಾಡುತ್ತಿದೆ. ಅದರ ಬಳಕೆ ಯೊಂದಿಗೆ ಶಾಲೆಗೆ ನಿಗದಿತ ಸಮಯಕ್ಕೆ ಕಡ್ಡಾಯ ಹಾಜರಿ ಇದ್ದಾಗ ಮಾತ್ರ ಅದರ ಮಹತ್ವ ಹೆಚ್ಚಾಗುತ್ತದೆ. ಅಲ್ಲದೇ ಸಾರಿಗೆ ನಿಯಮಗಳನ್ನು ಪಾಲನೆ ಮಾಡಿ ಕೊಂಡು ಶಿಸ್ತಿನಿಂದ ಹೋಗಬೇಕು’ ಎಂದು ಸಲಹೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಬಸವಂತರಡ್ಡಿ ಗೌಡ ಮಲ್ಹಾರ, ಸಹ ಕಾರ್ಯದರ್ಶಿ ಮಲ್ಲಣ್ಣಗೌಡ ಮಾಲಿ ಪಾಟೀಲ, ಕಾರ್ಯ ಕಾರಿ ಮಂಡಳಿಯ ಸದಸ್ಯರಾದ ಶರಣಗೌಡ ಬಿರಾದಾರ ಗೊಂದೆಡಗಿ, ಸಂಗಪ್ಪ ಗೌಡ ಐರಡ್ಡಿ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಶರಣಪ್ಪ ಸಾತನೂರ ಕರ್, ಹಂಪಣ್ಣ ಸಜ್ಜನ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.