ADVERTISEMENT

ಪ್ರಜಾವಾಣಿ ಕ್ವಿಜ್ 14

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಪ್ರಜಾವಾಣಿ ಕ್ವಿಜ್ 14
ಪ್ರಜಾವಾಣಿ ಕ್ವಿಜ್ 14   

1. ‘ಜೀವನ’ ಪತ್ರಿಕೆಯ ಸಂಪಾದಕರಾಗಿದ್ದವರು ಯಾರು?

ಅ) ಅನಕೃ ಆ) ಕುವೆಂಪು

ಇ) ಡಿವಿಜಿ  ಈ) ಮಾಸ್ತಿ ವೆಂಕಟೇಶ ಅಯ್ಯಂಗಾರ್

ADVERTISEMENT

2. ‘ಕರ್ನಾಟಕ ಸಂಗೀತದ ತ್ರಿಮೂರ್ತಿ’ಗಳಲ್ಲಿ ಇವರಲ್ಲಿ ಯಾರು ಸೇರಿಲ್ಲ?

ಅ) ಪುರಂದರದಾಸರು ಆ) ತ್ಯಾಗರಾಜರು

ಇ) ಮುತ್ತುಸ್ವಾಮಿ ದೀಕ್ಷಿತರು ಈ) ಶ್ಯಾಮಾಶಾಸ್ತ್ರಿಗಳು

3. ‘ಅಂತರರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ’ವನ್ನು ಪ್ರತಿವರ್ಷದ ಯಾವ ದಿನ ಆಚರಿಸಲಾಗುತ್ತದೆ?

ಅ) ಜನವರಿ 15 ಆ) ಫೆಬ್ರುವರಿ 15

ಇ) ಮಾರ್ಚ್‌ 15 ಈ) ಏಪ್ರಿಲ್ 15

4. ಏಂಜಲಾ ಮರ್ಕೆಲ್ ಎಷ್ಟು ಬಾರಿ ಜರ್ಮನಿಯ ಚಾನ್ಸಲರ್ ಆಗಿ ಆಯ್ಕೆಯಾಗಿದ್ದಾರೆ?

ಅ) ಒಂದು ಆ) ನಾಲ್ಕು ಇ) ಆರು ಈ) ಎರಡು

5. ‘ನಾಗಸಿರಿ’ ಎನ್ನುವುದು ಯಾರ ಅಭಿನಂದನಗ್ರಂಥದ ಶೀರ್ಷಿಕೆ?

ಅ) ಕೆ. ಆರ್. ನಾಗರಾಜನ್ ಆ) ವಾಟಾಳ್ ನಾಗರಾಜ್

ಇ) ಎಚ್.ಎಲ್. ನಾಗೇಗೌಡ ಈ) ಹಂ.ಪಾ. ನಾಗರಾಜಯ್ಯ

6. ಪ್ರಸಾರ ಭಾರತಿಯ ಈಗಿನ ಅಧ್ಯಕ್ಷರು ಯಾರು?
ಅ) ಮಹೇಶ್ ಜೋಶಿ ಆ) ಕೃಷ್ಣ ಸಿಂಗ್

ಇ) ಎಂ.ವಿ. ಕಾಮತ್ ಈ) ಎ. ಸೂರ್ಯಪ್ರಕಾಶ್

7. ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿ ಯಾವುದು?

ಅ) ಜಾನ್ ಅಂಡ್ ಕಂ. ಆ) ಜಾನ್‍ಸ್ಮಿತ್ ಅಂಡ್ ಕಂ.

ಇ) ಜಾನ್ಸನ್ ಅಂಡ್ ಕಂ. ಈ) ಜಾನ್ ಟೇಲರ್ ಅಂಡ್ ಕಂ.

8. ‘ಹೇಮಾವತಿ’ ಚಲನಚಿತ್ರವು ಯಾರು ಬರೆದ ಕಾದಂಬರಿಯನ್ನು ಆಧರಿಸಿದ್ದು?

ಅ) ತರಾಸು ಆ) ಗೊರೂರು ರಾಮಸ್ವಾಮಿ ಅಯ್ಯಂಗಾರ್

ಇ) ತ್ರಿವೇಣಿ ಈ) ವಾಣಿ

9. ‘ಸ್ಯಾಂತಲಂ ಆಲ್ಬಂ’ ಎನ್ನುವುದು ಯಾವ ಗಿಡದ ಸಸ್ಯಶಾಸ್ತ್ರೀಯ ಹೆಸರು?

ಅ) ಶ್ರೀಗಂಧ ಆ) ಸಂಪಿಗೆ ಇ) ಭತ್ತ ಈ) ತುಳಸಿ

10. ಇವುಗಳಲ್ಲಿ ಹಿಂದೆ ಜಿಲ್ಲಾ ಕೇಂದ್ರವಾಗಿದ್ದ ಯಾವುದು?

ಅ) ತರೀಕೆರೆ ಆ) ಚನ್ನರಾಯಪಟ್ಟಣ ಇ) ಕಡೂರು ಈ) ಗುಬ್ಬಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:
1. ಆ) ಕೆಳದಿ 2. ಈ) ಶ್ಯಾಮ್ ಬೆನಗಲ್ 3. ಅ) ಮೃತ್ಯುಂಜಯ 4. ಅ) ಕೃಷ್ಣಕುಮಾರಿ ಕೊಲ್ಹಿ 5. ಇ) ಈಶಾನ್ಯ ರಾಜ್ಯಗಳು
6. ಈ) ಎಸ್. ಜಿ.ಸಿದ್ಧರಾಮಯ್ಯ 7. ಆ) ದೇಶಿ ಆರ್ಥಿಕತೆ 8. ಅ)ಶಾಜರ್ ರಿಜ್ವಿ 9. ಆ) ಸಂಗೀತ 10. ಆ) ಧರ್ಮಾಮೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.