ADVERTISEMENT

ಅಂಬಾರಿ: ಕನಸೊಂದು ಶುರುವಾಗಿದೆ...

​ಪ್ರಜಾವಾಣಿ ವಾರ್ತೆ
Published 7 ಮೇ 2015, 19:30 IST
Last Updated 7 ಮೇ 2015, 19:30 IST
ದಿವ್ಯ ಎಂ. ವಿನಯ್‌ಗೌಡ
ದಿವ್ಯ ಎಂ. ವಿನಯ್‌ಗೌಡ   

‘ಸುವರ್ಣ’ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಅಂಬಾರಿ’ ಜನಪ್ರಿಯತೆಯ ಅಂಬಾರಿಯಲ್ಲಿ ತೇಲುತ್ತಿದೆ. ಈ ಧಾರಾವಾಹಿಗೆ ಈಗ 250 ಸಂಚಿಕೆಗಳನ್ನು ಪೂರೈಸಿದ ಅಗ್ಗಳಿಕೆ. ಇಷ್ಟು ಮಾತ್ರವಲ್ಲ, ‘ಅಂಬಾರಿ’ ಬಳಗಕ್ಕೆ ಇದೀಗ ಐನೂರು ಕಂತು ಪೂರೈಸುವ ಕನಸೊಂದು ಶುರುವಾಗಿದೆ.

‘ಅಂಬಾರಿ’ ಕೈಲಾಶ್ ಮಳವಳ್ಳಿ ನಿರ್ದೇಶನದ ಧಾರಾವಾಹಿ. ಗಂಡ ಹೆಂಡತಿಯ ಸರಸ, ತಾಯಿಮಕ್ಕಳ ಅನುಬಂಧ– ಹೀಗೆ ಅಪ್ಪಟ ಕೌಟುಂಬಿಕ ಕಥನವನ್ನು ಹೊಂದಿರುವ ಈ ಧಾರಾವಾಹಿ, ಕೌಟುಂಬಿಕ ಪ್ರೇಕ್ಷಕರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆದಿದೆ. ‘ಅಂಬಾರಿ’ ಒಂದು ಅದ್ಭುತ ‘ಫ್ಯಾಮಿಲಿ ಪ್ಯಾಕೇಜ್‌’ ಎನ್ನುವುದು ವಾಹಿನಿಯ ಬಣ್ಣನೆ. ಅಂದಹಾಗೆ, ಪ್ರತಿದಿನ ಸಂಜೆ 6.30ಕ್ಕೆ ‘ಅಂಬಾರಿ’ ಪ್ರಸಾರವಾಗುತ್ತಿದೆ.

ಟಿ.ಕೆ. ವಿಜಯಕುಮಾರ್ ಧಾರಾವಾಹಿಯ ನಿರ್ಮಾಪಕರು. ವಿನಯ್ ಕೃಷ್ಣ ಕೂಡ ‘ಅಂಬಾರಿ’ಯ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿಕ್ಕಮಗಳೂರು, ಶ್ರೀರಂಗಪಟ್ಟಣ, ಮೈಸೂರು ಮೊದಲಾದ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಸೊಬಗನ್ನು ‘ಅಂಬಾರಿ’ ಮೈದುಂಬಿಕೊಂಡಿದೆ. ವಿನಯ್‌ಗೌಡ ಹಾಗೂ ದಿವ್ಯ ಎಂ. ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವೀಣಾ ಪೊನ್ನಪ್ಪ, ಪೂರ್ಣಚಂದ್ರ ತೇಜಸ್ವಿ, ಮಾಸ್ಟರ್ ಚಿನ್ಮಯಿ, ಲಕ್ಷ್ಮೀಶ್ರೀ ಭಾಗವತರ್, ಅಶ್ವಥ್, ಕಾರ್ತೀಕ್, ರೇಖಾಕುಮಾರ್, ಗೌತಮಿ, ತಾರಾಗಣದಲ್ಲಿರುವ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.