ADVERTISEMENT

ಈ ಬಾರಿ ಗಣೇಶ ಹಬ್ಬ ಆಚರಿಸದ ಸಲ್ಲು

‘ಟೈಗರ್ ಜಿಂದಾ ಹೈ’ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾದ ಕಾರಣ

ಏಜೆನ್ಸೀಸ್
Published 22 ಆಗಸ್ಟ್ 2017, 6:47 IST
Last Updated 22 ಆಗಸ್ಟ್ 2017, 6:47 IST
ಈ ಬಾರಿ ಗಣೇಶ ಹಬ್ಬ ಆಚರಿಸದ ಸಲ್ಲು
ಈ ಬಾರಿ ಗಣೇಶ ಹಬ್ಬ ಆಚರಿಸದ ಸಲ್ಲು   

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಸತತ 15 ವರ್ಷಗಳಿಂದ ಮನೆಯಲ್ಲಿ ವೈಭವದಿಂದ ಆಚರಿಸಿಕೊಂಡು ಬರುತ್ತಿರುವ ಗಣೇಶ ಹಬ್ಬವನ್ನು ಈ ಬಾರಿ ಕೈ ಬಿಟ್ಟಿದ್ದಾರೆ.

ಇದರ ಬದಲಾಗಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಗಣಪತಿ ಹಬ್ಬವನ್ನು ಆಚರಿಸಲಿದ್ದಾರೆ.ಈಗಾಗಲೇ ಅರ್ಪಿತಾ ಅವರು ಹಬ್ಬಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. 

ಸಲ್ಮಾನ್‌ ಖಾನ್ ಅವರು ಅಬುದಬಿಯಲ್ಲಿ ನಡೆಯುತ್ತಿರುವ ‘ಟೈಗರ್ ಜಿಂದಾ ಹೈ’ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಹಾಗಾಗಿ ಈ ಬಾರಿ ಒಂದು ದಿನದ ಮಟ್ಟಿಗೆ ಮಾತ್ರ ತಂಗಿಯ ಮನೆಗೆ ಬಂದು ಗಣಪತಿ ಹಬ್ಬದ ಆಚರಣೆಯಲ್ಲಿ ತೊಡಗಲಿದ್ದಾರೆ.

ADVERTISEMENT

ಕಳೆದ ಬಾರಿಯೂ ಕೂಡ ಟ್ಯೂಬ್‌ಲೈಟ್ ಶೂಟಿಂಗ್‌ ನಿಮಿತ್ತ ಗಣೇಶ ಹಬ್ಬ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.