ಆ ಎರಡು ವರ್ಷಗಳು
ರಿಷಿಕಾ ಮಧುಸೂದನ್ ನಿರ್ಮಾಣದ ಚಿತ್ರ ಇದು. ಮಧುಸೂಧನ್ ಇದರ ನಿರ್ದೇಶಕರು. ಅನುರೂಪ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರೇಣುಕ್ ಈ ಚಿತ್ರದ ನಾಯಕ. ಅಮಿತಾ ಕುಲಾಲ್ ನಾಯಕಿ. ರಾಮಕೃಷ್ಣ, ತ್ರಿವೇಣಿ ತಾರಾಗಣದಲ್ಲಿ ಇದ್ದಾರೆ. ಅನೂಪ್ ಸೀಳಿನ್ ಸಂಗೀತ, ರವಿ ಕಿಶೋರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
**
ಕಿರೀಟ
ಯುವಕರ ತಂಡವೊಂದು ರೂಪಿಸಿರುವ ಚಿತ್ರ ಇದು. ಇದನ್ನು ನಿರ್ದೇಶಿಸಿರುವವರು ಕಿರಣ್ ಚಂದ್ರ. ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಸಮರ್ಥ, ದೀಪ್ತಿ ಕಾಪ್ಸೆ, ಲೇಖಾ ಚಂದ್ರ, ರಿಶಿಕಾ ಸಿಂಗ್, ಉಗ್ರಂ ಮಂಜು, ದಿನೇಶ್ ಮಂಗಳೂರು, ಸುನೀಲ್, ಶಂಕರ್ ಸಿನಿಮಾದ ತಾರಾಗಣದಲ್ಲಿ ಇದ್ದಾರೆ. ಸಮೀರ್ ಕುಲಕರ್ಣಿ ಸಂಗೀತ, ಪರಮೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
**
ಸ್ನೇಹ ಚಕ್ರ
ವಿಜಯ್ ವೆಂಕಟ್ ಈ ಚಿತ್ರದ ನಾಯಕ. ನಾಯಕಿ ಆಗಿ ಅನ್ವಿತಾ ಬಣ್ಣ ಹಚ್ಚಿದ್ದಾರೆ. ಇದರ ನಿರ್ದೇಶಕರು ಮಂಜು ವಿಷ್ಣುವರ್ಧನ್ ಅವರು. ಸುರೇಶ್ ಕುಮಾರ್ ಇದರ ನಿರ್ಮಾಪಕರು. ರಾಜ್ ಭಾಸ್ಕರ್ ಸಂಗೀತ, ರವಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಶಿಲ್ಪಾ, ಕೆಂಪೇಗೌಡ, ಕಿಶೋರ್ ಕುಮಾರ್ ತಾರಾಗಣದಲ್ಲಿ ಇದ್ದಾರೆ.
**
ವಿಸ್ಮಯ
ಅರ್ಜುನ್ ಸರ್ಜಾ ಅಭಿನಯಿಸಿರುವ, ಅರುಣ್ ವೈದ್ಯನಾಥನ್ ನಿರ್ದೇಶನದ ಚಿತ್ರ ಇದು. ಇದು ಆ್ಯಕ್ಷನ್ ಆಧಾರಿತ ಚಿತ್ರ. ಶ್ರುತಿ ಹರಿಹರನ್ ಈ ಚಿತ್ರದ ನಾಯಕಿ. ಸುಧಾರಾಣಿ, ಸುಹಾಸಿನಿ, ಸುಮನ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ನವೀನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.