ADVERTISEMENT

ಮುಸ್ತಫಾ ಜತೆ ಸರಳ ವಿವಾಹವಾದ ಪ್ರಿಯಾಮಣಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 10:41 IST
Last Updated 23 ಆಗಸ್ಟ್ 2017, 10:41 IST
ಮುಸ್ತಫಾ ಜತೆ ಸರಳ ವಿವಾಹವಾದ ಪ್ರಿಯಾಮಣಿ
ಮುಸ್ತಫಾ ಜತೆ ಸರಳ ವಿವಾಹವಾದ ಪ್ರಿಯಾಮಣಿ   

ಬೆಂಗಳೂರು: ದಕ್ಷಿಣ ಭಾರತದ ಬಹುಭಾಷಾ ನಟಿ  ಪ್ರಿಯಾಮಣಿ ಬುಧವಾರ ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜಾ ಅವರನ್ನು ವಿವಾಹವಾದರು.

ಇಲ್ಲಿನ ಜಯನಗರದಲ್ಲಿರುವ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಪ್ರಿಯಾಮಣಿ ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್‌ ಆದರು. ಈ ಸಂದರ್ಭದಲ್ಲಿ ಪ್ರಿಯಾಮಣಿ ಮತ್ತು ಮುಸ್ತಫಾ ಅವರ ಕುಟುಂಬ ವರ್ಗದವರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

ಪ್ರಿಯಾಮಣಿ ಹಸಿರು ಮತ್ತು ಹಳದಿ ಬಣ್ಣ ಮಿಶ್ರಿತ ಸೀರೆಯಲ್ಲಿ ಕಂಗೊಳಿಸಿದರೆ, ಮುಸ್ತಫಾ ರಾಜಾ ಅವರು ಬಿಳಿ ಕುರ್ತಾದಲ್ಲಿ ಮಿಂಚುತ್ತಿದ್ದರು.

ADVERTISEMENT

ಕಳೆದ ಮೇ 27ರಂದು ಪ್ರಿಯಾಮಣಿ ಮುಸ್ತಫಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂಬೈ ನಿವಾಸಿಯಾದ ಮುಸ್ತಫಾ ಉದ್ಯಮಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.