ADVERTISEMENT

‘ಮೇರಿ ಕೋಮ್‌’ ಚೆಲುವೆಯ ಶುಭಾಶಯ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2015, 19:30 IST
Last Updated 25 ಮಾರ್ಚ್ 2015, 19:30 IST
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ   

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಿರುವ ‘ಮೇರಿ ಕೋಮ್’ ಚಿತ್ರ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಮನರಂಜನಾ ಚಿತ್ರ ಎಂಬ ಹೆಸರಿನಲ್ಲಿ  ಈ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.
ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಒಲಿದಿರುವ ಸಂಭ್ರಮದಲ್ಲಿರುವ ಪ್ರಿಯಾಂಕಾ ಇತ್ತೀಚೆಗೆ ತಮ್ಮ ಟ್ವಿಟ್ಟರ್‌ ಪೇಜ್‌ನಲ್ಲಿ ‘ಮೇರಿ ಕೋಮ್‌’ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಇಷ್ಟೇ ಅಲ್ಲದೆ ಬಾಲಿವುಡ್‌ನ ‘ಕ್ವೀನ್‌’ ಹಾಗೂ ‘ಹೈದರ್‌’ ಚಿತ್ರಗಳಿಗೂ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಪ್ರಿಯಾಂಕಾ ಆ ಚಿತ್ರದ ನಿರ್ದೇಶಕರಿಗೂ ಶುಭ ಕೋರಿದ್ದಾರೆ. ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿರುವ ‘ಕ್ವೀನ್‌’ ಚಿತ್ರದ ನಿರ್ದೇಶಕ ವಿಕಾಸ್‌ ಬೆಹಲ್‌ ‘ಕ್ವೀನ್‌ನ ನಿಜವಾದ ಕಿಂಗ್‌’ ಎಂದು ಟ್ವೀಟ್‌ ಮಾಡಿದ್ದಾರೆ.

ಹೈದರ್‌ ಚಿತ್ರ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಶುಭಾಶಯಗಳು ವಿಶಾಲ್‌ ಸರ್‌. ಎಲ್ಲಾ ಪ್ರಶಸ್ತಿಗಳಿಗೂ ನಿಮ್ಮ ಸಿನಿಮಾ ಅರ್ಹವಾದದ್ದು’ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ. ‘ಬಿಸ್ಮಿಲ್‌’ ಹಾಡಿಗಾಗಿ ಸುಖ್ವಿಂದರ್‌ ಸಿಂಗ್‌ ಅವರಿಗೆ ಉತ್ತಮ ಹಿನ್ನಲೆ ಗಾಯಕ, ಉತ್ತಮ ಸಂಭಾಷಣೆ ಹಾಗೂ ಸಂಗೀತ ನಿರ್ದೇಶನ, ಉತ್ತಮ ವಸ್ತ್ರ ವಿನ್ಯಾಸ, ಉತ್ತಮ ನೃತ್ಯ ಸಂಯೋಜನೆ  ಪ್ರಶಸ್ತಿಗಳನ್ನು ಹೈದರ್‌ ಸಿನಿಮಾ ತನ್ನದಾಗಿಸಿಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.